ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್:ಮೂರನೇ ದಿನದ ಮೂರನೇ ಪಂದ್ಯ ಟರ್ಫ್ 45 ತಂಡಕ್ಕೆ ಗೆಲುವು
admincoorgdaily
ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಮೂರನೇ ಪಂದ್ಯದಲ್ಲಿ ಟರ್ಫ್ 45 ತಂಡವು 04-01 ಗೋಲುಗಳ ಅಂತರದಿಂದ SMGSS ತಂಡವನ್ನು ಮಣಿಸಿದೆ.ಟರ್ಫ್ 45 ತಂಡದ ಪರವಾಗಿ ವಿಜೇಶ್ ಅಮೋಘ ಆಟದ ಮೂಲಕ ನಾಲ್ಕು ಗೋಲು ಬಾರಿಸಿ ಮಿಂಚಿದರು.SMGSS ತಂಡದ ಪರವಾಗಿ ಉಶಾಲ್ ಒಂದು ಗೋಲು ಗಳಿಸಿದರು.ಟರ್ಫ್ 45 ತಂಡದ ವಿಶಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.