Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಅಮಿಗೋಸ್ ಕಲ್ಲುಬಾಣೆ ಸೆಮಿಫೈನಲ್ ಗೆ ಲಗ್ಗೆ

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೊದಲು ಕ್ವಾಟರ್ ಫೈನಲ್ ಪಂದ್ಯದಲ್ಲಿ ಚೆಲ್ಸಿ ಗೋಣಿಕೊಪ್ಪ ತಂಡವನ್ನು ಮಣಿಸಿ ಅಮಿಗೋಸ್ ಕಲ್ಲುಬಾಣೆ ತಂಡವು 05-01 ಗೋಲುಗಳ ಅಂತರದಿಂದ ಗೆಲುವು ಪಡೆದು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ.ಅಮಿಗೋಸ್ ತಂಡದ ಪರವಾಗಿ ಅನಸ್,ಚುಪ್ಪಿ,ತಾಸಿಲ್ ಹಾಗೂ ನಬಿಲ್ ತಲಾ ಒಂದು ಗೋಲು ಗಳಿಸಿದರು.ಚೆಲ್ಸಿ ತಂಡದ ಪರವಾಗಿ ಸವಾದ್ ಒಂದು ಗೋಲುಗಳಿಸಿದರು.ಅಮಿಗೋಸ್ ತಂಡದ ಸುಫಿಯಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.