ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಆರನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯ:ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡಕ್ಕೆ ಭರ್ಜರಿ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ಆರನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯದಲ್ಲಿ ಮಿಲನ್ಸ್ ಎಫ್.ಸಿ ಅಮ್ಮತ್ತಿ ತಂಡವು 04-01 ಗೋಲುಗಳ ಅಂತರದಿಂದ ಬಾಲು ಮೆಮೋರಿಯಲ್ ತಿರುಚ್ಚಿ ತಂಡವನ್ನು ಮಣಿಸಿ ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.ಮಿಲನ್ಸ್ ತಂಡದ ಪರವಾಗಿ ಯೋಗಿತ್,ನಿಖಿಲ್, ಪಾಂಡ್ಯ ಹಾಗೂ ದಿವಾಕರ್ ತಲಾ ಒಂದು ಗೋಲು ಬಾರಿಸಿದರು.ತಿರುಚ್ಚಿ ತಂಡದ ಪರವಾಗಿ ವಿವೇಕ್ ಗೋಲುಗಳಿಸಿದರು.
What's Your Reaction?






