State News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನದ ಐದನೇ ಪಂದ್ಯ:ಕಲ್ಲುಬಾಯ್ಸ್ ತಂಡಕ್ಕೆ ಭರ್ಜರಿ ಗೆಲುವು

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಎರಡನೇ ದಿನದ ಐದನೇ ಪಂದ್ಯದಲ್ಲಿ ಕಲ್ಲುಬಾಯ್ಸ್ ತಂಡವು ಭರ್ಜರಿ ಗೆಲುವು ಸಾಧಿಸಿದೆ.ಕಲ್ಲುಬಾಯ್ಸ್ ತಂಡವು 06-02 ಗೋಲುಗಳ ಅಂತರದಿಂದ ಸ್ಪಾಟ್ ಎಫ್.ಸಿ ತಂಡದ ವಿರುದ್ಧ ಗೆಲುವು ಪಡೆದಿದೆ.ಕಲ್ಲುಬಾಯ್ಸ್ ತಂಡದ ಪರವಾಗಿ ಮೊಹಮ್ಮದ್ ಮೂರು,ಅಭಿ ಎರಡು ಹಾಗೂ ಕಿಚು ಒಂದು ಗೋಲು ಗಳಿಸಿದರು.ಸ್ಪಾಟ್ ಎಫ್.ಸಿ ತಂಡದ ಪರವಾಗಿ ಸಿಯಾದ್ ಮತ್ತು ಆನಂದ್ ತಲಾ ಒಂದು ಗೋಲು ದಾಖಲಿಸಿದರು.ಕಲ್ಲುಬಾಯ್ಸ್ ತಂಡದ ಮೊಹಮ್ಮದ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.