ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನದ ನಾಲ್ಕನೇ ಪಂದ್ಯ:ಶಾರೂನ್ ಹಾಗೂ ರಸೂಲ್ ಮಿಂಚಿನ ಆಟ: ರೆಡ್ಸ್ ಯುನೈಟೆಡ್ ತಂಡಕ್ಕೆ ಗೆಲುವು

May 2, 2025 - 23:52
May 3, 2025 - 02:05
 0  254
ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನದ ನಾಲ್ಕನೇ  ಪಂದ್ಯ:ಶಾರೂನ್ ಹಾಗೂ ರಸೂಲ್ ಮಿಂಚಿನ ಆಟ: ರೆಡ್ಸ್ ಯುನೈಟೆಡ್ ತಂಡಕ್ಕೆ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಎರಡನೇ ದಿನದ ನಾಲ್ಕನೇ ಪಂದ್ಯದಲ್ಲಿ ರೆಡ್ಸ್ ಯುನೈಟೆಡ್ ತಂಡವು ಮಂಗಳೂರು ಯುನೈಟೆಡ್  ತಂಡದ ವಿರುದ್ಧ 04-01 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.ರೆಡ್ಸ್ ಯುನೈಟೆಡ್ ತಂಡದ ಪರವಾಗಿ ಶಾರೂನ್ ಹಾಗೂ ‌ರಸೂಲ್ ತಲಾ ಎರಡು ಗೋಲು ಬಾರಿಸಿ ಮಿಂಚಿದರು.ಯುನೈಟೆಡ್  ತಂಡದ ಪರವಾಗಿ ವಲೈಟೈನ್ ಒಂದು ದಾಖಲಿಸಿದರು.ರೆಡ್ಸ್ ಯುನೈಟೆಡ್ ತಂಡದ ರಸೂಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0