Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಎರಡನೇ ದಿನ ಪಂದ್ಯ: ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ತಂಡಕ್ಕೆ ಭರ್ಜರಿ ಗೆಲುವು

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಎರಡನೇ ದಿನದ ಮೊದಲ ಪಂದ್ಯದಲ್ಲಿ ಕ್ಯಾಪ್ಟನ್ಸ್ ಇಲೆವೆನ್ ಪಾಲಿಬೆಟ್ಟ ತಂಡವು 07-01 ಗೋಲುಗಳ ಅಂತರದಿಂದ ಆಲ್ಫಾ ಎಫ್.ಸಿ ಪಡಿಯಾನಿ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.ಕ್ಯಾಪ್ಟನ್ಸ್ ಇಲೆವೆನ್ ತಂಡದ ಪರವಾಗಿ ಕುಟ್ಟಾಯಿ ನಾಲ್ಕು, ರಕ್ಷಿತ್ ಎರಡು ಹಾಗೂ ದೀಕು ಒಂದು ಗೋಲು ಬಾರಿಸಿದರು.ಆಲ್ಫಾ ತಂಡದ ಪರವಾಗಿ ತಶ್ರೀಫ್ ಒಂದು ಗೋಲುಗಳಿಸಿದರು.ಕ್ಯಾಪ್ಟನ್ಸ್ ಇಲೆವೆನ್ ತಂಡದ ಕುಟ್ಟಾಯಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.