ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಏಳು ತಂಡಗಳಿಗೆ ಗೆಲುವು

May 2, 2025 - 13:40
 0  52
ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಏಳು ತಂಡಗಳಿಗೆ ಗೆಲುವು
ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಏಳು ತಂಡಗಳಿಗೆ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಕಾಲ್ಚೆಂಡು ಪಂದ್ಯಾವಳಿಗೆ ಚಾಲನೆ ದೊರೆತಿದ್ದು,ಮೊದಲ ದಿನದ ಪಂದ್ಯದಲ್ಲಿ ಏಳು ತಂಡಗಳು ಗೆಲುವು ಸಾಧಿಸಿ ಮುಂದಿ ಹಂತಕ್ಕೆ ಅರ್ಹತೆ ಪಡೆದಿದೆ.

ಮೊದಲ ದಿನ ಮೊದಲ ಪಂದ್ಯದಲ್ಲಿ ಅಮಿಟಿ ಯುನೈಟೆಡ್ ತಂಡವು 5-1 ಗೋಲುಗಳ ಅಂತರದಿಂದ ರೋಜಾರಿಯನ್ಸ್ ಗೋಣಿಕೊಪ್ಪ ತಂಡವನ್ನು ಮಣಿಸಿದೆ.ಅಮಿಟಿ ಯುನೈಟೆಡ್ ತಂಡದ ಪರವಾಗಿ ರಂಶಾದ್ 02, ರಶೀದ್ ಹಾಗೂ ಸಾದಿಕ್ ತಲಾ ಒಂದು ಗೋಲು ಬಾರಿಸಿದರು.ಒಂದು ಗೋಲು ಓನ್ ಗೋಲಾಗಿ ದಾಖಲಾಗಿತ್ತು.ರೋಜಾರಿಯನ್ಸ್ ತಂಡದ ಪರವಾಗಿ ಪ್ರವೀಣ್ ಗೋಲು ದಾಖಲಿಸಿದರು.ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಅಮಿಟಿ ತಂಡದ ರಂಶಾದ್ ಪಡೆದುಕೊಂಡರು.

 ಎರಡನೇ ಪಂದ್ಯದಲ್ಲಿ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಗೋಣಿಕೊಪ್ಪ ತಂಡವು 4-2 ಗೋಲುಗಳ ಅಂತರದಿಂದ ಹಾಜಿರ್ ಸ್ಟೋನ್ ಮಲಪ್ಪುರಂ ತಂಡವನ್ನು ಮಣಿಸಿದೆ.ಚೆಲ್ಸಿ ತಂಡದ ಪರವಾಗಿ ಅನೀಸ್ ಎರಡು ಹಾಗೂ ಫಾರೂಕ್ ಮತ್ತು ಸವಾದ್ ತಲಾ ಒಂದು ಗೋಲು ಬಾರಿಸಿದರು.ಹಾಜಿರ್ ಸ್ಟೋನ್ ತಂಡದ ಪರವಾಗಿ ಮಿಥುನ್ ಹಾಗೂ ಸುಫಿಯಾನ್ ಗೋಲು ದಾಖಲಿಸಿದರು.ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಚೆಲ್ಸಿ ತಂಡದ ಅನೀಸ್ ಪಡೆದುಕೊಂಡರು.

 ಮೂರನೇ ಪಂದ್ಯದಲ್ಲಿ ಚಾಯ್ಸ್ ಇಂಟರ್ನ್ಯಾಷನಲ್ ತಂಡವು 03-02 ಗೋಲುಗಳ ಅಂತರದಿಂದ ಹಿಂದೂ ಸ್ಥಾನ್ ಎಫ್.ಸಿ ಕೊಡಗು ತಂಡವನ್ನು ಮಣಿಸಿದೆ.ಚಾಯ್ಸ್ ತಂಡದ ಪರವಾಗಿ ಅಭಿ ಎರಡು ಹಾಗೂ ಅನ್ಸಾರ್ ಒಂದು ಗೋಲು ಬಾರಿಸಿದರು.ಹಿಂದೂಸ್ಥಾನ್ ತಂಡದ ಪರವಾಗಿ ಶರೀಕ್ ಹಾಗೂ ಫಾಯಿಜ್ ತಲಾ ಒಂದು ಗೋಲು ದಾಖಲು ಮಾಡಿದರು.ಚಾಯ್ಸ್ ತಂಡದ ಅಭಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ನಾಲ್ಕನೇ ಪಂದ್ಯದಲ್ಲಿ ಗ್ರೀನ್ ಸ್ಟಾರ್ ಕ್ಯಾಲಿಕೆಟ್ ಪಾಲೆಮಾಡು ತಂಡವು 02-01 ಗೋಲುಗಳ ಅಂತರದಿಂದ ರೆಶ್ ಹವರ್ ಕೊಡಗು ತಂಡದ ವಿರುದ್ಧ ಗೆಲುವು ಸಾಧಿಸಿದೆ.ಗ್ರೀನ್ ಸ್ಟಾರ್ ತಂಡದ ಪರವಾಗಿ ಅಮರನಾಥ್ ಎರಡು ಗೋಲು ಬಾರಿಸಿ ಮಿಂಚಿ,ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.ರಶ್ ಹವರ್ ತಂಡದ ಪರವಾಗಿ ಆಕಾಶ್ ಒಂದು ಗೋಲು ಬಾರಿಸಿ ತಂಡಕ್ಕೆ ನೆರವಾದರು.

 ಐದನೇ ಪಂದ್ಯದಲ್ಲಿ ಅಮಿಗೋಸ್ ಕಲ್ಲುಬಾಣೆ ವಿರಾಜಪೇಟೆ ತಂಡವು 05-01 ಗೋಲುಗಳ ಅಂತರದಿಂದ ಮೆರ್ಚಂಟ್ಸ್ ಮಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.ಅಮಿಗೋಸ್ ತಂಡದ ಪರವಾಗಿ ಅನ್ಬಿಲ್,ನಿಬಿಲ್,ಚುಪ್ಪಿ ಹಾಗೂ ಆದಿಲ್ ಗೋಲು ಬಾರಿಸಿದರು.ಮೆರ್ಚಂಟ್ಸ್ ತಂಡದ ಪರವಾಗಿ ಕಬೀರ್ ಗೋಲು ಬಾರಿಸಿದರು.ಅಮಿಗೋಸ್ ತಂಡದ ಮ್ಯಾನ್ ಪ್ಲೇಯರ್ ಆಫ್ ದಿ- ಮ್ಯಾಚ್ ಪ್ರಶಸ್ತಿ ಪಡೆದರು.

 ಆರನೇ ಪಂದ್ಯದಲ್ಲಿ ಆತಿಥೇಯ ಆಲ್ ಸ್ಟಾರ್ ಗೋಣಿಕೊಪ್ಪ ತಂಡವು 4-1 ಗೋಲುಗಳ ಅಂತರದಿಂದ ಎಫ್.ಸಿ ಮೂಡಿಗೆರೆ ಚಿಕ್ಕಮಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.ಆಲ್ ಸ್ಟಾರ್ ತಂಡದ ಪರವಾಗಿ ಸುಹೈಲ್ 02,ಅಜಯ್, ಸೋಲಮನ್ ಜೊಜೋ ತಲಾ ಒಂದು ಗೋಲು ಬಾರಿಸಿ ಗೆಲುವಿಗೆ ನೆರವಾದರು.ಮೂಡಿಗೆರೆ ತಂಡದ ಪರವಾಗಿ ನಿಶ್ಚಿತ್ ಗೋಲು ದಾಖಲಿಸಿದರು.ಆಲ್ ಸ್ಟಾರ್ ತಂಡದ ಸುಹೈಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

 ಏಳನೇಪಂದ್ಯದಲ್ಲಿ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ತಂಡವು ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಗೆಲುವು ಸಾಧಿಸಿದೆ.ಈಗಲ್ಸ್ ಬೆಂಗಳೂರು ಹಾಗೂ ಫ್ರೆಂಡ್ಸ್ ಎಫ್.ಸಿ ಸಿದ್ದಾಪುರ ತಂಡಗಳ ನಡುವಿನ ರೋಚಕ ಪಂದ್ಯದಲ್ಲಿ ಎರಡು ತಂಡಗಳು ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು.ಈಗಲ್ಸ್ ಎಫ್.ಸಿ ತಂಡವು 2-0 ಗೋಲುಗಳನ್ನು ದಾಖಲಿಸಿ ಪಂದ್ಯದಲ್ಲಿ ಪಾರಮ್ಯ ಮೆರೆದಿದ್ದರು.ಆದರೆ ಹೊಂದಾಣಿಕೆ ಮತ್ತು ಆಕ್ರಮಣಕಾರಿ ಆಟದಿಂದ ಒಂದು ಗೋಲು ದಾಖಲಿಸಿದರು. ಮತ್ತೆ ವೇಗದ ಆಟಕ್ಕೆ ಮಣೆ ಹಾಕಿದ ಈಗಲ್ಸ್ ತಂಡವು ಗೋಲು ಬಾರಿಸಿ 3-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿತು. ಆದರೆ ಪಂದ್ಯಾವಳಿಯ ಕೊನೆಯ ಐದು ನಿಮಿಷ ಇರುವಾಗ ಫ್ರೆಂಡ್ಸ್ ಎಫ್.ಸಿ ತಂಡವು ಮತ್ತೊಂದು ಗೋಲು ದಾಖಲಿಸಿದರು.ಆದರೆ ಫ್ರೆಂಡ್ಸ್ ‌ಎಫ್.ಸಿ ತಂಡದ ಮುನ್ನಡೆ ಆಟಗಾರ ಸಜ್ಜಾದ್ ಅವರ ಕಾಲ್ಚಳಕದ ಮೂಲಕ ಕೇವಲ ಪಂದ್ಯ ಮುಕ್ತಾಯಗೊಳ್ಳಲು 15 ಸೆಕೆಂಡ್ ಬಾಕಿ ಇರುವ ಗೋಲು ದಾಖಲಿಸಿ 3-3 ಗೋಲುಗಳ ಸಮಬಲ ಸಾಧಿಸಿದರು.ಪೆನಾಲ್ಟಿ ಶೂಟೌಟ್ ನಲ್ಲಿ 4-3 ಗೋಲುಗಳ ಅಂತರದಿಂದ ಫ್ರೆಂಡ್ಸ್ ಎಫ್.ಸಿ ತಂಡವು ಅಮೋಘ ಗೆಲುವು ಸಾಧಿಸಿತು.ಫ್ರೆಂಡ್ಸ್ ‌ಎಫ್.ಸಿ ತಂಡದ ಸಜ್ಜಾದ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0