Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ಚೆಲ್ಸಿ ಗೋಣಿಕೊಪ್ಪ ತಂಡಕ್ಕೆ ಗೆಲುವು

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಎರಡನೇ ಪಂದ್ಯದಲ್ಲಿ ಚೆಲ್ಸಿ ಸ್ಪೋರ್ಟ್ಸ್ ಕ್ಲಬ್ ಗೋಣಿಕೊಪ್ಪ ತಂಡವು 4-2 ಗೋಲುಗಳ ಅಂತರದಿಂದ ಹಾಜಿರ್ ಸ್ಟೋನ್ ಮಲಪ್ಪುರಂ ತಂಡವನ್ನು ಮಣಿಸಿದೆ.ಚೆಲ್ಸಿ ತಂಡದ ಪರವಾಗಿ ಅನೀಸ್ ಎರಡು ಹಾಗೂ ಫಾರೂಕ್ ಮತ್ತು ಸವಾದ್ ತಲಾ ಒಂದು ಗೋಲು ಬಾರಿಸಿದರು.ಹಾಜಿರ್ ಸ್ಟೋನ್ ತಂಡದ ಪರವಾಗಿ ಮಿಥುನ್ ಹಾಗೂ ಸುಫಿಯಾನ್ ಗೋಲು ದಾಖಲಿಸಿದರು.ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಚೆಲ್ಸಿ ತಂಡದ ಅನೀಸ್ ಪಡೆದುಕೊಂಡರು.