Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್: ನಾಲ್ಕನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯ: ಫಿಫಾ ಪೆರುಂಬಾಡಿ ತಂಡಕ್ಕೆ ಕೊನೆಯ ಕ್ಷಣದಲ್ಲಿ ಒಲಿದ ವಿಜಯಲಕ್ಷ್ಮಿ

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ದಿನದ ನಾಲ್ಕನೇ ಪ್ರಿ-ಕ್ವಾಟರ್ ಫೈನಲ್ ಪಂದ್ಯದಲ್ಲಿ ಫಿಫಾ ಪೆರುಂಬಾಡಿ ತಂಡವು 04-03 ಗೋಲುಗಳ ಅಂತರದಿಂದ ಅಮೋಘ ಗೆಲುವು ಸಾಧಿಸಿ ಕ್ವಾಟರ್ ಫೈನಲ್ ಗೆ ಲಗ್ಗೆಯಿಟ್ಟಿದೆ.

ಕ್ಯಾಪ್ಟನ್ಸ್ ಇಲೆವೆನ್ ತಂಡವು 3-1 ಗೋಲುಗಳ ಅಂತರದಿಂದ ಮುನ್ನಡೆ ಸಾಧಿಸಿ ಪಂದ್ಯದ ಸಂಪೂರ್ಣ ಹಿಡಿತ ಸಾಧಿಸಿತ.ಆದರೆ 37,39 ಮತ್ತು 40+ ನಿಮಿಷಗಳ ಸಮಯದಲ್ಲಿ ಫಿಫಾ ಪೆರುಂಬಾಡಿ ತಂಡವು ಗೋಲು ಬಾರಿಸಿ ಅಮೋಘ ಗೆಲುವು ಸಾಧಿಸಿತು.ಫಿಫಾ ಪೆರುಂಬಾಡಿ ತಂಡದ ಪರವಾಗಿ ಇಮ್ಮು 03 ಮತ್ತು ಮುರ್ಷಿದ್ ಒಂದು ಗೋಲು ಬಾರಿಸಿದರು.ಕ್ಯಾಪ್ಟನ್ಸ್ ಇಲೆವೆನ್ ತಂಡದ ಪರವಾಗಿ ದೀಕು 01 ,ಮನೋಜ್ ಎರಡು ಗೋಲು ಬಾರಿಸಿದರು.ಫಿಫಾ ತಂಡದ ಇಮ್ಮು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.