Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್: ಅಮಿಗೋಸ್ ಕಲ್ಲುಬಾಣೆ ತಂಡಕ್ಕೆ ಭರ್ಜರಿ ಗೆಲುವು

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಐದನೇ ಪಂದ್ಯದಲ್ಲಿ ಅಮಿಗೋಸ್ ಕಲ್ಲುಬಾಣೆ ವಿರಾಜಪೇಟೆ ತಂಡವು 05-01 ಗೋಲುಗಳ ಅಂತರದಿಂದ ಮೆರ್ಚಂಟ್ಸ್ ಮಂಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.ಅಮಿಗೋಸ್ ತಂಡದ ಪರವಾಗಿ ಅನ್ಬಿಲ್,ನಿಬಿಲ್,ಚುಪ್ಪಿ ಹಾಗೂ ಆದಿಲ್ ಗೋಲು ಬಾರಿಸಿದರು.ಮೆರ್ಚಂಟ್ಸ್ ತಂಡದ ಪರವಾಗಿ ಕಬೀರ್ ಗೋಲು ಬಾರಿಸಿದರು. ಅಮಿಗೋಸ್ ತಂಡದ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.