Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್: ಆತಿಥೇಯ ಆಲ್ ಸ್ಟಾರ್ ಎಫ್.ಸಿ ತಂಡಕ್ಕೆ ಗೆಲುವು

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಆರನೇ ಪಂದ್ಯದಲ್ಲಿ ಆತಿಥೇಯ ಆಲ್ ಸ್ಟಾರ್ ಗೋಣಿಕೊಪ್ಪ ತಂಡವು 4-1 ಗೋಲುಗಳ ಅಂತರದಿಂದ ಎಫ್.ಸಿ ಮೂಡಿಗೆರೆ ಚಿಕ್ಕಮಗಳೂರು ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.ಆಲ್ ಸ್ಟಾರ್ ತಂಡದ ಪರವಾಗಿ ಸುಹೈಲ್ 02,ಅಜಯ್, ಸೋಲಮನ್ ಜೊಜೋ ತಲಾ ಒಂದು ಗೋಲು ಬಾರಿಸಿ ಗೆಲುವಿಗೆ ನೆರವಾದರು.ಮೂಡಿಗೆರೆ ತಂಡದ ಪರವಾಗಿ ನಿಶ್ಚಿತ್ ಗೋಲು ದಾಖಲಿಸಿದರು.ಆಲ್ ಸ್ಟಾರ್ ತಂಡದ ಸುಹೈಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.