Sports News

ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್: ಚಾಯ್ಸ್ ಇಂಟರ್ನ್ಯಾಷನಲ್ ತಂಡಕ್ಕೆ ರೋಚಕ ಗೆಲುವು

admincoorgdaily

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೂರನೇ ಪಂದ್ಯದಲ್ಲಿ ಚಾಯ್ಸ್ ಇಂಟರ್ನ್ಯಾಷನಲ್ ತಂಡವು 03-02 ಗೋಲುಗಳ ಅಂತರದಿಂದ ಹಿಂದೂ ಸ್ಥಾನ್ ಎಫ್.ಸಿ ಕೊಡಗು ತಂಡವನ್ನು ಮಣಿಸಿದೆ.ಚಾಯ್ಸ್ ತಂಡದ ಪರವಾಗಿ ಅಭಿ ಎರಡು ಹಾಗೂ ಅನ್ಸಾರ್ ಒಂದು ಗೋಲು ಬಾರಿಸಿದರು.ಹಿಂದೂಸ್ಥಾನ್ ತಂಡದ ಪರವಾಗಿ ಶರೀಕ್ ಹಾಗೂ ಫಾಯಿಜ್ ತಲಾ ಒಂದು ಗೋಲು ದಾಖಲು ಮಾಡಿದರು.ಚಾಯ್ಸ್ ತಂಡದ ಅಭಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.