ಎಸ್.ಎಸ್.ಎಲ್ಸಿ: ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆಗೆ ಶೇಕಡಾ 100% ರಷ್ಟು ಫಲಿತಾಂಶ

ಮಡಿಕೇರಿ: 2024-25ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶದಲ್ಲಿ ವಿರಾಜಪೇಟೆ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕೊಂಡಂಗೇರಿ ಶಾಲೆಯು ಶೇಕಡಾ 100 ರಷ್ಟು ಫಲಿತಾಂಶ ಬಂದಿದೆ.
ಶಾಲೆಯಲ್ಲಿ 20 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 4 ಮಕ್ಕಳು ಉನ್ನತ ಶ್ರೇಣಿಯನ್ನು 11 ಮಕ್ಕಳು ಪ್ರಥಮ ಶ್ರೇಣಿಯನ್ನು ಹಾಗೂ 5 ಮಕ್ಕಳು ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ. ಸಯ್ಯದ್ ರಿಹಾನ್ 572 ಅಂಕಗಳು, ನಿಹಾನ 566 ಅಂಕಗಳು, ನುಸೈಬ 558 ಹಾಗೂ ಹರ್ಷದ್ 532 ಅಂಕಗಳು ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಾಗಿದ್ದಾರೆ. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಜೆ. ಸಿ ಮಾತನಾಡಿ ಶಾಲೆಯ ಶಿಕ್ಷಕರ ನಿರಂತರ ಪ್ರಯತ್ನ ಹಾಗೂ ಇಲಾಖಾ ಅಧಿಕಾರಿಗಳ,ಎಸ್. ಡಿ. ಎಂ. ಸಿ ಸಮಿತಿಯವರ, ಪೋಷಕರ ಮತ್ತು ಊರಿನವರ ಸಹಕಾರ ಈ ಸಾಧನೆಗೆ ಪೂರಕವಾಯಿತು ಎಂದರು.
ಪ್ರವೇಶಾತಿ ಪ್ರಾರಂಭ:
ಎಲ್ಲಾ ರೀತಿಯ ಉತ್ತಮ ಶಾಲಾವಾತಾವರಣ ಹಾಗೂ ಸೌಲಭ್ಯಗಳನ್ನು ಹೊಂದಿರುವ ಶಾಲೆಯಲ್ಲಿ 2025-26ನೇ ಸಾಲಿಗೆ 9ನೇ ತರಗತಿಗೆ ಪ್ರವೇಶಾತಿ ಆರಂಭವಾಗಿದ್ದು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಮುಖ್ಯಶಿಕ್ಷಕರು ಹಾಗೂ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಹನೀಫ್ ರವರು ತಿಳಿಸಿದ್ದಾರೆ.
What's Your Reaction?






