Kodagu

ಎಸ್ಸೆಸ್ಸೆಲ್ಸಿ ಪರೀಕ್ಷೆ-2: ದಿನಾಂಕದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ👇🏻

admincoorgdaily

ಮಡಿಕೇರಿ:2025 ಮಾರ್ಚ್ -ಏಪ್ರಿಲ್ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆ-1 ಕ್ಕೆ ಜಿಲ್ಲೆಯ 171 ಪ್ರೌಢ ಶಾಲೆಗಳಿಂದ 6255 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 5142 ವಿದ್ಯಾರ್ಥಿಗಳು ಪರೀಕ್ಷೆ-1 ರಲ್ಲಿ ಉತ್ತೀರ್ಣರಾಗಿದ್ದು ಶೇ.82.21 ಫಲಿತಾಂಶ ದಾಖಲಾಗಿದೆ. 

ಈ ಫಲಿತಾಂಶದಲ್ಲಿ 1159 ವಿದ್ಯಾರ್ಥಿಗಳ ಫಲಿತಾಂಶ ಅಪೂರ್ಣವಾಗಿತ್ತು. ಇದರಲ್ಲಿ 1099 ಜನ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ನೋಂದಣಿ ಆಗಿದ್ದಾರೆ. ಇನ್ನು 60 ಜನ ನೋಂದಣಿ ಆಗಬೇಕಾಗಿದೆ. ಪರೀಕ್ಷೆಗೆ ನೋಂದಣಿ ಆಗಲು ಮೇ, 10 ಕೊನೆಯ ದಿನವಾಗಿದೆ. ಪರೀಕ್ಷೆಗೆ ಶುಲ್ಕ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ನೋಂದಣಿ ಮಾಡಲು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಅಗತ್ಯ ಕ್ರಮವಹಿಸುವುದು. ಪರೀಕ್ಷೆ-2 ಮೇ, 26 ರಿಂದ ಮೇ, 31 ರವರೆಗೆ ನಡೆಯಲಿದೆ. 

ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪರೀಕ್ಷೆಯು ಸಿಸಿ.ಟಿ.ವಿ ವೆಬ್‍ಕಾಸ್ಟಿಂಗ್ ಕಣ್ಗಾವಲಿನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.