"ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ" ಜೂನ್ 21ರಂದು ವಿಶ್ವಯೋಗ ದಿನಾಚರಣೆ

ಮಡಿಕೇರಿ:ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಘೋಷ್ಯವಾಕ್ಯದೊಂದಿಗೆ ಇದೇ ಜೂನ್ 21 ರಂದು ಕೊಡಗು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿ.ಪಂಚಾಯತ್, ನೀಮಾ ಕೊಡಗು ಹಾಗೂ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಡಿಕೇರಿ ನಗರದ ಗೌಡ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಶೈಲಜಾ ತಿಳಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಜೂನ್ 21 ಬೆಳಗ್ಗೆ ೬.೪೫ ಗಂಟೆಗೆ ಉದ್ಘಾಟನೆ ನಡೆಯಲಿದೆ ಬೆಳಗ್ಗೆ ೭ ರಿಂದ ೮ ಗಂಟೆಯವರೆಗೆ ಯೋಗ ಪ್ರಾತ್ಯಕ್ಷಿಕೆ, ಜೂ.೨೦ ರಂದು ಯೋಗಾಸನಗಳ ಪೂರ್ವಭ್ಯಾಸವನ್ನು ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನಡೆಸಲಾಗುವುದು. ಜೂ.೧೦ ರಂದು ’ಹಸಿರು ಯೋಗ ಹರಿತ್ ಯೋಗ’ ಘೋಷವಾಖ್ಯದಡಿ ಬೆಳಗ್ಗೆ ೮.೩೦ ಗಂಟೆಗೆ ಗಾಂಧಿಮೈದಾನದಿಂದ ನಗರದ ಸುದರ್ಶನ ವೃತ್ತದ ಗಾಂಧಿ ಭವನದವರೆಗೆ ಯೋಗಭ್ಯಾಸದೊಂದಿಗೆ ಶ್ರಮದಾನ ಮತ್ತು ಸ್ವಚ್ಛತಾ ಅಭಿಯಾನ ಹಾಗೂ ಪ್ರಮುಖವಾಗಿ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವೈದ್ಯಾಧಿಕಾರಿ ಶುಭಾ ಮಾತನಾಡಿ, ಇಲಾಖೆ ವತಿಯಿಂದ ಪ್ರತಿಯೊಬ್ಬರಿಗೂ ಯೋಗ ತಲುಪಿಸುವ ನಿಟ್ಟಿನಲ್ಲಿ ಗ್ರಾಮಸಭೆ, ನ್ಯಾಯಾಲಯ, ಸರ್ಕಾರಿ ಕಚೇರಿ, ಸರ್ಕಾರೇತರ ಸಂಸ್ಥೆಗಳಲ್ಲಿ ೧೦-೧೫ ನಿಮಿಷ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಯೋಗ ಕುರಿತು ಉತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಯೋಗ ರಿಲ್ಸ್, ಯೋಗ ಜಿಂಗಲ್ಸ್ ರಚನೆ ಹಾಗೂ ಇನ್ನಿತರೆ ಸ್ಪರ್ಧೆಗಳು ನಡೆಯಲಿದೆ. ಆಸಕ್ತರು https://yoga.ayush.gov.in/yoga-sangam ಲಿಂಕ್ ಬಳಸಿ ಕಳುಹಿಸಬಹುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ
ನೀಮಾ ಕೊಡಗು ಜಿಲ್ಲಾಧ್ಯಾಕ್ಷ ರಾಜರಾಮ್, ಯೋಗ ಶಿಕ್ಷಕ ಕೆ.ಕೆ.ಮಹೇಶ್ ಕುಮಾರ್ , ಜಿಲ್ಲಾ ಆಯುಷ್ ಇಲಾಖೆ ಪ್ರಥಮ ದರ್ಜೆ ಸಹಾಯಕರಾದ ಕರುಣಾಕರ್ ಉಪಸ್ಥಿತರಿದ್ದರು.
What's Your Reaction?






