ಕೊಡಗು ಜಿಲ್ಲಾ ಬಲಿಜ ಸಂಘ ಅಸ್ತಿತ್ವಕ್ಕೆ: ಮುಂದಿನ ಒಂದು ವರ್ಷದಲ್ಲಿ 1000 ಸದಸ್ಯತ್ವದ ಗುರಿ
admincoorgdaily
ಮಡಿಕೇರಿ:ಮುಂದಿನ ಒಂದು ವರ್ಷದಲ್ಲಿ 1000 ಸದಸ್ಯತ್ವ ನೋಂದಾಣಿ ಮಾಡುವ ಗುರಿ ಹೊಂದಿದ್ದು,ಬಲಿಜ ಸಮಾಜದ ಏಳಿಗೆಗಾಗಿ ಶ್ರೀ ಯೋಗಿ ನಾರಾಯಣ ಕೊಡಗು ಜಿಲ್ಲಾ ಬಲಿಜ ಸಂಘ ಅಸ್ಥಿತ್ವಕ್ಕೆ ತರಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ಮಾಹಿತಿ ನೀಡಿದ್ದಾರೆ.
ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಲಿಜ ಸಮಾಜ ಸುಮಾರು 30-35 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪ್ರಸ್ತುತ ಸಂಘದಲ್ಲಿ 40 ಮಂದಿ ಸದಸ್ಯತ್ವ ಪಡೆದುಕೊಂಡದಿದೆ.
ಸಮಾಜಬಾಂಧವರು ದೂ.ಸಂ: 9691757257 ಸಂಖ್ಯೆಯನ್ನು ಸಂಪರ್ಕಿಸಿ ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಈಗಾಗಲೇ ಸರ್ಕಾರ ಶಿಕ್ಷಣಕ್ಕೆ ಶೇ.೫ರಷ್ಟು ಮೀಸಲಾತಿ ನೀಡಿದೆ. ಅದೇ ರೀತಿ ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುಬ್ರಮಣಿ, ಖಜಾಂಚಿ ಟಿ.ಎ.ಪ್ರಕಾಶ್, ಸದಸ್ಯರಾದ ಟಿ.ಆರ್.ಗಣೇಶ್ ಇದ್ದರು.