ಕೊಡಗು ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ
admincoorgdaily
ಮಡಿಕೇರಿ:ಕೊಡಗು ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಎನ್‌ಸಿಸಿ ಘಟಕ, ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳೊಂದಿಗೆ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಕಾಯ೯ಕ್ರಮದಲ್ಲಿ ವಿದ್ಯಾರ್ಥಿಗಳು ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಗಿಡ ನೆಟ್ಟರು. ಶಾಲೆಯ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್., ಆಡಳಿತಾಧಿಕಾರಿ ರವಿ ಪಿ., ಎನ್‌ಸಿಸಿ ಅಧಿಕಾರಿ ಮೇಜರ್ ದಾಮೋದರ್, ಅರಣ್ಯಾಧಿಕಾರಿಗಳಾದ ಅಭಿಷೇಕ್ ಐಎಫ್‌ಎಸ್ ಹಾಗೂ ಲತಾ (ಎಸಿಎಫ್), ಎನ್‌ಸಿಸಿ ಸಿಬ್ಬಂದಿ ರಮೇಶ್ ಮತ್ತು ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.