Kodagu

ಟಾಸ್ಕ್ ಪೋರ್ಸ್ ಸಭೆಯಲ್ಲಿ ಪೋಲಿಸರಿಗೆ ಸಿನಿಮಾ ಪ್ರಸಂಗ ನೆನಪಿಸಿದ ಶಾಸಕ ಪೊನ್ನಣ್ಣ

admincoorgdaily

ಮಡಿಕೇರಿ:ಟಾಸ್ಕ್ ಪೋರ್ಸ್ ಸಭೆಯಲ್ಲಿ ಪೋಲೀಸ್ ಅಧಿಕಾರಿಗಳಿಗೆ ಸಹಜವಾಗಿ ಸಿನಿಮಾದಲ್ಲಿ ನಡೆಯುವ ಪ್ರಸಂಗವನ್ನು ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ವಿವರಿಸಿದ ಘಟನೆ ಕಾರುಗುಂದ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದಿದೆ.

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲ್ಲೂಕು ವ್ಯಾಪ್ತಿಯ ಅಧಿಕಾರಿಗಳ ಜೊತೆ ಟಾಸ್ಕ್ ಪೋರ್ಸ್ ಸಭೆಗೆ ಸಮಯಕ್ಕೆ ಸರಿಯಾಗಿ ಎ.ಎಸ್.ಪೊನ್ನಣ್ಣ ಹಾಗೂ ಅಧಿಕಾರಿಗಳು ಆಗಮಿಸಿದ್ದರು.ಒಂದು ಗಂಟೆ ತಡವಾಗಿ ಪೋಲೀಸ್ ಅಧಿಕಾರಿಗಳ ತಂಡದ ಆಗಮನವಾಯಿತು.

ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆದ ಪೊನ್ನಣ್ಣನವರು ಸಿನಿಮಾದಲ್ಲಿ ಎಲ್ಲಾ ಘಟನೆಗಳು ಸಾವಕಾಶವಾಗಿ ಮುಗಿದ ನಂತರ ಪೋಲೀಸ್ ಜೀಪ್ ಮತ್ತು ಪೋಲೀಸರು ಬರುತ್ತಾರೆ.ಅದೇ ರೀತಿಯಲ್ಲಿ ನೀವು ಬಂದಿದ್ದೀರಾ.ಸಿನಿಮಾಗಳಿಂದ ಪ್ರಭಾವಿತರಾಗಿದ್ದೀರಾ ಎಂದು ಕೇಳಿದರು.ಮಹಜರ್ ಕಾರ್ಯಕ್ರಮವಿದ್ದುದರಿಂದ ತಡವಾಗಿದೆ .ಇನ್ನು ಮುಂದಕ್ಕೆ ಈ ರೀತಿ ಆಗುವುದಿಲ್ಲ ಎಂದು ಅಧಿಕಾರಿಗಳು ವಿನಂತಿಸಿಕೊಂಡರು.