ಡ್ರಗ್ಸ್ ಬಿಡಿ,ಫುಟ್ಬಾಲ್ ಆಡಿ ಮಾದರಿ ಸಂದೇಶ ನೀಡಿದ ಆಲ್ ಸ್ಟಾರ್!

May 7, 2025 - 09:42
 0  26
ಡ್ರಗ್ಸ್ ಬಿಡಿ,ಫುಟ್ಬಾಲ್ ಆಡಿ ಮಾದರಿ ಸಂದೇಶ ನೀಡಿದ ಆಲ್ ಸ್ಟಾರ್!

ಒಂದೆಡೆ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸುತ್ತಿರುವ ಕ್ರೀಡಾಭಿಮಾನಿಗಳು,ಮತ್ತೊಂದೆಡೆ ಮೈದಾನದಲ್ಲಿ ಕೊಡಗು ವರ್ಲ್ಡ್ ಕಪ್ ಪ್ರಶಸ್ತಿಗೆ ಕಾದಾಟ ನಡೆಯುತ್ತಿತ್ತು.ಆದರೆ ಮಧ್ಯರಾತ್ರಿಯಲ್ಲಿ ಜಿಎಂಪಿ ಶಾಲಾ ಮೈದಾನದಲ್ಲಿ ನೆರೆದಿದ್ದ ಜನತೆಯನ್ನು ಐದು ನಿಮಿಷಗಳ ಮೌನಕ್ಕೆ ಕೊಂಡೊಯ್ಯಿದಿದ್ದರು.ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಗಳಿಂದಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಎಲ್.ಇ.ಡಿ ಪರದೆಯಲ್ಲಿ ಐದು ನಿಮಿಷಗಳ ಕಾಲ ಕಿರು ವಿಡಿಯೋ ಚಿತ್ರಣವನ್ನು ಪ್ರದರ್ಶಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು.

ಆಲ್ ಸ್ಟಾರ್ ತಂಡದ ಮಾದಕ ವ್ಯಸನಗಳ ಜಾಗೃತಿ ಕಾರ್ಯಕ್ಕೆ ಕಿರು ವಿಡಿಯೋ ಪ್ರದರ್ಶನದ ನಂತರ ಮೈದಾನದಲ್ಲಿ ನೆರೆದಿದ್ದ ಜನತೆ ಎದ್ದು ನಿಂತು ಚಪ್ಪಾಳೆ ತಟ್ಟಿ SAY NOT DRUGS, SAY YES FOOTBALL ಎಂಬ ಘೋಷವಾಕ್ಯವನ್ನು ಕೂಗುವುದರ ಮೂಲಕ ಆಲ್ ಸ್ಟಾರ್ ತಂಡದ ಸಮಾಜಮುಖಿ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0