CRIME

ನಾಪತ್ತೆ ಪ್ರಕರಣ: ಎರಡು ದಿನ ಕಳೆದರೂ ಪತ್ತೆಯಾಗದ ಮಾಜಿ ಸೈನಿಕ ಗಿರೀಶ್! ಕಣಿವೆ ಬಳಿ ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

admincoorgdaily

ಮಡಿಕೇರಿ: ಚೆಟ್ಟಳ್ಳಿ ಸಮೀಪದ ಕಂಡಕರೆ ನಿವಾಸಿ ಮಾಜಿ ಸೈನಿಕ ಗಿರೀಶ್(46) ನಾಪತ್ತೆಯಾಗಿ ಎರಡು ದಿನ ಕಳೆದರೂ ಇದುವರೆಗೆ ಪತ್ತೆಯಾಗಿಲ್ಲ.ಗುರುವಾರದಿಂದ ಕಾವೇರಿ ನದಿಯಲ್ಲಿ ಶೋಧ ಕಾರ್ಯಚರಣೆ ನಡೆಯುತ್ತಿದೆ.

ಶುಕ್ರವಾರ ಶೋಧ ಕಾರ್ಯಾಚರಣೆ ವೇಳೆ ಕಣಿವೆ ಬಳಿ ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.ಕುಶಾಲನಗರ ಪೊಲೀಸರು,ಅಗ್ನಿ ಶಾಮಕದಳ,ದುಬಾರೆ ಸಿಬ್ಬಂದಿಗಳಿಂದ ಶೋಧ ಕಾರ್ಯಚರಣೆ ನಡೆಯುತ್ತಿದೆ.ಈ ಸಂದರ್ಭ ಕೊಳೆತ ಸ್ಥಿತಿಯಲ್ಲಿ ಅಪರಿಚತ ಪುರುಷ ವ್ಯಕ್ತಿಯ ಮೃತದೇಹದ ಪತ್ತೆಯಾಗಿದೆ.ಮಾಜಿ ಸೈನಿಕ ಗಿರೀಶ್ ಅವರ ಸ್ಕೂಟಿ ಮತ್ತು ಸ್ಕೂಟಿಯ ಕೀ ಕುಶಾಲನಗರ ಸಮೀಪದ ಗುಡ್ಡೆಹೊಸೂರು ತೆಪ್ಪದಕಂಡಿಯ ಬಳಿ ಪತ್ತೆಯಾಗಿತ್ತು.ಈ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿತ್ತು.ಆದರೆ ಕಾವೇರಿ ನದಿಗೆ ಹಾರಿ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ಖಚಿತತೆ ಯಾರಿಗೂ ಇಲ್ಲ.