ನಾಳೆ ಕುಟ್ಟ- ಶ್ರೀಮಂಗಲ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

May 16, 2025 - 16:48
 0  10
ನಾಳೆ ಕುಟ್ಟ- ಶ್ರೀಮಂಗಲ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಮಡಿಕೇರಿ:-ಶ್ರೀಮಂಗಲ 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಫೀಡರ್‍ಗಳಲ್ಲಿ ಮೇ, 17 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರದ ನಿರ್ವಾಹಣೆ ಹಾಗೂ ಇತರೆ ಅಭಿವೃದ್ದಿ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾತಂಗಾಲ, ತೈಲ, ಕುಟ್ಟ, ಸಿಂಕೋನ, ಕೆ.ಎಂ.ಕೊಡ್ಲಿ, ಶ್ರೀಮಂಗಲ, ಹರಿಹರ, ನಾಲ್ಕೇರಿ, ಚೀಪೆಕೊಲ್ಲಿ, ಗುಡ್ಡಮಾಡು, ಬಿರುಗ, ಕೆ ಬಾಡಗ, ಶೆಟ್ಟಿಗೇರಿ, ಕುರ್ಚಿ, ಬಿರುನಾಣಿ, ವೆಸ್ಟ್ ನೆಮ್ಮಲೆ, ತೆರಾಲು, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0