ನೆಲಜಿ ಶ್ರೀ ಇಗ್ಗುತಪ್ಪ ದೇವಸ್ಥಾನದ ನೆಲಜಿ ಕೊಡಗು ವಾರ್ಷಿಕ ಭಕ್ತಸಮಾರಾಧಾನಾ ಉತ್ಸವಕ್ಕೆ ಶಾಸಕ ಎಎಸ್ ಪೊನ್ನಣ್ಣ ಭಾಗಿ: ವಿಶೇಷ ಪೂಜೆ ಸಲ್ಲಿಕೆ

ಮಡಿಕೇರಿ :ತಾಲೂಕಿನ ನೆಲಜಿ ಗ್ರಾಮದ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಆಯೋಜನೆಗೊಂಡಿರುವ, ನೆಲಜಿ ಕೊಡಗು ವಾರ್ಷಿಕ ಭಕ್ತಸಮಾರಾಧಾನಾ ಉತ್ಸವಕ್ಕೆ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಭೇಟಿ ನೀಡಿ ಶ್ರೀ ದೇವರಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸ್ಥಳೀಯರು ಮಾನ್ಯ ಶಾಸಕರಿಗೆ ಈ ಹಿಂದೆ ವಾರ್ಷಿಕ ಭಕ್ತಸಮಾರಾಧನ ಉತ್ಸವಕ್ಕೆ ಆಗಮಿಸಬೇಕೆಂದು ಕೋರಿಕೆ ಸಲ್ಲಿಸಿದ್ದರು.
ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಮಾನ್ಯ ಶಾಸಕರು, ಇಂತಹ ವಿಶೇಷ ಸಂದರ್ಭದಲ್ಲಿ ದೇವರ ಸನ್ನಿಧಿಗೆ ಆಗಮಿಸಿ ಇಲ್ಲಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದು ತನಗೆ ಅತ್ಯಂತ ಸಂತಸ ನೀಡಿದೆ. ಇಂತಹ ವಿಶೇಷ ದಿನದಲ್ಲಿ ನನಗೆ ಭಾಗಿಯಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಮಾನ್ಯ ಶಾಸಕರು ಧನ್ಯವಾದ ಅರ್ಪಿಸಿದರು. ಬಳಿಕ ಶ್ರೀದೇವರ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪೌಳಿಯ ಲೋಕಾರ್ಪಣೆ ಕಾರ್ಯವನ್ನು ಮಾನ್ಯ ಶಾಸಕರು ನೆರವೇರಿಸಿದರು. ಈ ಸಂದರ್ಭದಲ್ಲಿ,ಕಾಂಗ್ರೆಸ್ ಮುಖಂಡರಾದ ಸಂಪನ್ ಅಯ್ಯಪ್ಪ,ಲವ ಚಿಣ್ಣಪ್ಪ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು
What's Your Reaction?






