ಪಾಲಿಬೆಟ್ಟದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಮತ್ತು ಉಚಿತ ಮುಂಜಿ ಕಾರ್ಯಕ್ರಮ

Apr 27, 2025 - 08:23
 0  26
ಪಾಲಿಬೆಟ್ಟದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಮತ್ತು ಉಚಿತ ಮುಂಜಿ ಕಾರ್ಯಕ್ರಮ
ಪಾಲಿಬೆಟ್ಟದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಮತ್ತು ಉಚಿತ ಮುಂಜಿ ಕಾರ್ಯಕ್ರಮ

ಸಿದ್ದಾಪುರ :-

ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವಜನ ಸಂಘ, ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಪಾಲಿಬೆಟ್ಟ ಯುನಿಟ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಬದರ್ ಮೌಲಿದ್ ಮಜ್ಲಿಸ್ ನ 12ನೇ ವಾರ್ಷಿಕ ಪ್ರಯುಕ್ತ ಬೃಹತ್ ಬುರ್ದಾ ಮಜ್ಲಿಸ್ 

ದಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

 ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮ 

 ಕೆ.ಎಂ.ಜೆ ಪಾಲಿಬೆಟ್ಟ ಯುನಿಟ್ ಅಧ್ಯಕ್ಷ ಕುಂಞಿ ಮಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಪಾಲಿಬೆಟ್ಟ ಜುಮಾ ಮಸ್ಜಿದ್ ಖತೀಬರಾದ ಝುಬೈರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು .ಪ್ರಖ್ಯಾತ ಮದ್ಹ್ ಗಾಯಕ ಹಾಫಿಳ್ ಸ್ವಾದಿಖ್ ಅಲಿ ಫಾಳಿಲಿ ಗೂಡಲ್ಲೂರು ರವರ ನೇತೃತ್ವದಲ್ಲಿ ರಬೀಹ್ ಮುಈನಿ, ಶಮ್ಮಾಸ್ ಕಾಂತಪುರಂ ಮುಂತಾದ ಮದ್ಹ್ ಗಾಯಕರು ಸೇರಿದಂತೆ ಧಾರ್ಮಿಕ ಪಂಡಿತರ ಸಮ್ಮುಖದಲ್ಲಿ ಬುರ್ದಾ ಮಜ್ಲಿಸ್ ನಡೆಯಿತು.ಪಾಲಿಬೆಟ್ಟ ಮುಹ್ಯುದ್ದೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ ಸೇರಿದಂತೆ ಉಮರಾ-ಉಲಮಾ,ದಾರ್ಮಿಕ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ನಂತರ ಕೆ.ಎಂ.ಜೆ, ಎಸ್.ವೈ.ಎಸ್, ಎಸ್ಸೆಸ್ಸೆಫ್ ಪಾಲಿಬೆಟ್ಟ ಯುನಿಟ್ ಸಮಿತಿಗಳ ಆಶ್ರಯದಲ್ಲಿ 6ನೇ ವರ್ಷದ ಉಚಿತ ಮುಂಜಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. 45 ಮಕ್ಕಳು ಈ ಕ್ಯಾಂಪ್ ನ ಸದುಪಯೋಗ ಪಡೆದುಕೊಂಡರು‌.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0