ಮಡಿಕೇರಿ:ಮಿಲಿಟರಿ ಅವರಿಗೆ ಮೀಸಲಾದ ಅಕ್ರಮ ಮದ್ಯ ಮಾರಾಟ : 60.750 ಲೀಟರ್ ಮದ್ಯ ವಶಕ್ಕೆ
admincoorgdaily
ಮಡಿಕೇರಿ:ಅಬಕಾರಿ ಅಕ್ರಮಗಳ ತಡೆಯುವಿಕೆಯ ಮೂಲಕ ಮಿಲಿಟರಿ ಮದ್ಯದ ಹೆಸರಿನಲ್ಲಿ ನಕಲಿ ಮದ್ಯ ಮಾರಾಟ ತಡೆಯುವ ಹಿನ್ನಲೆಯಲ್ಲಿ ಅಬಕಾರಿ ಸಚಿವರು ನೀಡಿದ ನಿರ್ದೇಶನದಂತೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ವ್ಯಾಪ್ತಿಯಲ್ಲಿ ಅಬಕಾರಿ ದಾಳಿ ನಡೆಸಿರುವ ಅಬಕಾರಿ ಪೊಲೀಸರು ನಿವೃತ್ತ ಮಿಲಿಟರಿಯವರಿಂದ ಹಾಗೂ ಇತರೆ ಮೂಲಗಳಿಂದ ಸಂಗ್ರಹಿಸಿ ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ಖಚಿತ ಮಾಹಿತಿ ಆಧಾರಿಸಿ ದಾಳಿ ನಡೆಸಿ ಆಸಾಮಿಯೋರ್ವನಿಂದ 81 ವಿವಿಧ ಮದ್ಯದ ಬ್ರಾಂಡ್ ಗಳ ಬಾಟಲಿಗಳು ಸೇರಿ 60.750 ಲೀಟರ್ ನಷ್ಟು ಮಿಲಿಟರಿಯವರಿಗೆ ಮಾತ್ರ ಮೀಸಲಾದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ನಾಗೇಶ್ ಕುಮಾರ್ ಅವರು ತಿಳಿಸಿದ್ದಾರೆ.