ರಾಜಾಸೀಟ್ ಪಾರ್ಕಿಂಗ್ ಕಲೆಕ್ಷನ್ ಮಾಡುವ ಅಮಾಯಕ ಹುಡಗರ ಮೇಲೆ ಬಿಜೆಪಿ ಮುಖಂಡರ ಹಲ್ಲೆ! ಪ್ರಕರಣ ದಾಖಲು
admincoorgdaily
ಮಡಿಕೇರಿ:ಮಡಿಕೇರಿ ನಗರದ ಪ್ರಸಿದ್ಧ ಪ್ರವಾಸಿತಾಣ ರಾಜಾಸೀಟ್ ಬಳಿ ವಾಹನ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸುತ್ತಿರುವ ಅಮಾಯಕ ಹುಡುಗರ ಮೇಲೆ ಬಿಜೆಪಿ ಮುಖಂಡರು ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮೇ.8ರ ಗುರುವಾರ ಸಂಜೆ 6 ಗಂಟೆಗೆ ಹಲ್ಲೆ ನಡೆದಿದ್ದು,ಮಡಿಕೇರಿ ನಗರಸಭಾ ಸದಸ್ಯ , ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಹಾಗೂ ಮಾಜಿ ನಾಮ ನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಹಾಗೂ ಗಿರೀಶ್ ಜಿ.ಆರ್. ಇತರರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದುರ್ಗಪ್ಪ, ಜಲಾಲುದ್ದೀನ್, ನಿಶಾದ್ ಎಂಬುವರ ಮೇಲೆ ಹಲ್ಲೆ ಮಾಡಿ, ಇವರುಗಳ ಬಳಿಯಿದ್ದ 50 ಸಾವಿರ ನಗದು, ವಾಕಿಟಾಕಿ, ಕಲೆಕ್ಷನ್ ಮೆಷಿನ್ ಕಸಿದುಕೊಂಡ ಆರೋಪವನ್ನು ಮಾಡಲಾಗಿದ್ದು,ಹಲ್ಲೆ ಮಾಡಿ ಕೊಲೆ ಬೆದರಿಕೆ ಒಡ್ಡಿರುವ ದೂರಿನನ್ವಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಾಗದೆ. ಸೆಕ್ಷನ್ 54/2025 ಕಲಂ 118/1 304/1 351/2 190/ ಬಿಎನ್ ಎಸ್ 2023 ರಡಿಯಲ್ಲಿ ಪ್ರಕರಣ ದಾಖಲಾಗಿದೆ.