ರೋಟರಿ ಜಿಲ್ಲಾ ಯೋಜನಾ ಕಾಯ೯ದಶಿ೯ಯಾಗಿ ಕಿರಿಯಮಾಡ ರತನ್ ತಮ್ಮಯ್ಯ ನೇಮಕ

ಮಡಿಕೇರಿ:ರೋಟರಿ ಜಿಲ್ಲೆ 3181 ನ ಜಿಲ್ಲಾ ಯೋಜನಾ ಕಾಯ೯ದಶಿ೯ಯಾಗಿ ಮಡಿಕೇರಿ ರೋಟರಿ ಸಂಸ್ಥೆಯ ಕಿರಿಯಮಾಡ ರತನ್ ತಮ್ಮಯ್ಯ ನೇಮಕಗೊಂಡಿದ್ದಾರೆ.
ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಿಗೊಳಪಡುವ 87 ರೋಟರಿ ಸಂಸ್ಥೆಗಳಿಗೆ ಜಿಲ್ಲಾ ಯೋಜನಾ ಕಾಯ೯ದಶಿ೯ಯಾಗಿ ರತನ್ ತಮ್ಮಯ್ಯ ಅವರನ್ನು ಜುಲೈ 1 ರಿಂದ ಜಾರಿಗೆ ಬರುವಂತೆ ಮುಂದಿನ ಸಾಲಿನ ರೋಟರಿ ಅವಧಿಗೆ ಆಯ್ಕೆ ಮಾಡಿ ಮುಂದಿನ ಅವಧಿಯ ರೋಟರಿ ಜಿಲ್ಲಾ ಗವನ೯ರ್ ರಾಮ್ಕಿ ನೇಮಕಾತಿ ನೀಡಿದ್ದಾರೆ.
ಮಡಿಕೇರಿ ರೋಟರಿ ಸಂಸ್ಥೆಯಲ್ಲಿ ಅಧ್ಯಕ್ಷ, ವಲಯ ಸೇನಾನಿ, ರೋಟರಿ ವಲಯ 6 ರ ಸಹಾಯಕ ಗವನ೯ರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾಯ೯ನಿವ೯ಹಿಸಿದ ಅನುಭವ ಹೊಂದಿರುವ ರತನ್ ತಮ್ಮಯ್ಯ ಮುಂದಿನ ರೋಟರಿ ಅವಧಿಗೆ ಸಂಧ್ಯಾ ಸುರಕ್ಷ, ಅಂಗನವಾಡಿಗಳಿಗೆ ಕಾಯಕಲ್ಪ, ರಕ್ತದಾನ ಅಭಿಯಾನ, ಮಹಿಳೆಯರ ಸ್ವಾವಲಂಭಿ ಜೀವನಕ್ಕಾಗಿ ಸ್ವಾವಲಂಭಿ ಸ್ತ್ರೀ , ಸಕಾ೯ರಿ ಶಾಲಾ ಮಕ್ಕಳಿಗೆ ಪ್ರೋತ್ಸಾಹ ಸೇರಿದಂತೆ 11 ವಿವಿಧ ಯೋಜನೆಗಳನ್ನು ರೋಟರಿ ಸಂಸ್ಥೆಗಳು ಅನುಷ್ಟಾನಗೊಳಿಸುವ ಹೊಣೆ ಹೊಂದಿದ್ದಾರೆ.
What's Your Reaction?






