ವಿರಾಜಪೇಟೆ: ಅನಾಮಧೇಯ ವ್ಯಕ್ತಿ ಆಸ್ಪತ್ರೆಯಲ್ಲಿ ದಾಖಲು: ಪತ್ತೆ ಹಚ್ಚುವಂತೆ ಇಲಾಖೆ ಮನವಿ:

ವಿರಾಜಪೇಟೆ:ಕೆಲವು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವ್ಯಕ್ತಿಯೊಬ್ಬರು ದಾಖಲಾಗಿದ್ದು ವ್ಯಕ್ತಿಯ ಕುಟುಂಬದ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲದಾಗಿದೆ. ಇಲಾಖೆಯು ಪತ್ತೆಗಾಗಿ ಮನವಿ ಮಾಡಿಕೊಂಡಿದೆ.
ವಿರಾಜಪೇಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ದಾಖಲಾಗಿದ್ದಾರೆ. ವ್ಯಕ್ತಿಯು ತನ್ನ ಹೆಸರು ಮನು,ತಂದೆಯ ಹೆಸರು ರವಿ .ಎಂದು ಮಾಹಿತಿ ನೀಡಿದ್ದಾರೆ. ಪ್ರಾಯ 40 ವರ್ಷ ಎಂದು ಅಂದಾಜು ಎಂದು ವೈದ್ಯರು ಗುರುತಿಸಿದ್ದಾರೆ. ವ್ಯಕ್ತಿಯ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸಿಕೊಂಡು ಹೋಗುತ್ತಿದ್ದು, ದಾಖಲಾದ ವ್ಯಕ್ತಿ ಗೆ ಹೆಚ್ಚಿನ ಚಿಕಿತ್ಸೆ ನೀಡಲು ಆಸ್ಪತ್ರೆ ಯಲ್ಲಿ ಅವಕಾಶ ಇಲ್ಲದಿರುವುದರಿಂದ ಕುಟುಂಬದ ಪತ್ತೆಯಾಗಿ ಇಲಾಖೆಗಳು ಮನವಿ ಮಾಡಿದ್ದಾರೆ.ವ್ಯಕ್ತಿಯ ಕುರಿತು ತಿಳಿದುಬಂದಲ್ಲಿ ವಿರಾಜಪೇಟೆ ಪುರಸಭೆಯ ಆರೋಗ್ಯ ಸಹಾಯಕರು, ವಿರಾಜಪೇಟೆ ನಗರ ಪೋಲಿಸ್ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಲ್ಲಿ ಸಂಪರ್ಕಿಸುವಂತೆ ಇಲಾಖೆಯು ಮನವಿ ಮಾಡಿದೆ.
What's Your Reaction?






