ಅಂಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ 1,50,000 ಮಂಜೂರಾತಿ ಪತ್ರ ವಿತರಣೆ
ಶನಿವಾರಸಂತೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ ಸೋಮವಾರಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ 1,50,000 ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ನಿರ್ದೇಶಕರಾದ ವಿಠಲ್ ಸಾಲಿಯನ್ ಸರ್ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾತನಾಡಿ ಊರಿನ ಜನರಲ್ಲಿ ಮಂಜುನಾಥ ಸ್ವಾಮಿ ನಿಮ್ಮ ಊರಿನಲ್ಲಿ ನೆಲೆಸಿದ್ದಾನೆ. ದೇವಸ್ಥಾನದ ಜಾತ್ರೆ ಸಮಯದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹೊಟ್ಟೆ ತುಂಬಾ ಪ್ರಸಾದ ನೀಡಲಾಗುತ್ತದೆ. ದೇವರು ಸಂತೃಪ್ತಿ ಆಗುತ್ತಾನೆ ಮತ್ತು ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನೆ ಅಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ ಇಂದು ಧರ್ಮಸ್ಥಳ ಸಂಘದಿಂದ ಅನೇಕ ಜನಪರ ಯೋಜನೆಗಳು ಇದ್ದು ಅದರಲ್ಲಿ ಇದು ಸಹ ಒಂದು ಇಂದು ಆರ್ಥಿಕ ಹಾಗೂ ಸಾಮಾಜಿಕ ಸೈಕ್ಷಣಿಕ ಯೋಜನೆಗಳನ್ನು ತಲುಪಿಸುವ ಮೂಲಕ ಜನರಿಗೆ ಹತ್ತಿರವಾಗುತ್ತಿದೆ ಈ ಎಲ್ಲಾ ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಎಸ್ ಎಸ್ ಈರಪ್ಪ ಕಾರ್ಯದರ್ಶಿ ಎಎಸ್ ವರದರಾಜ ಸತೀಶ ಸುಂದರೇಶ, ನವೀನ ಗುರೀಶ ತಮ್ಮಯ್ಯ ವಿಶ್ವನಾಥ ಗಣೇಶ ರೂಪೇಶ ಮತ್ತು ಸಂಘದ ಸದಸ್ಯರು ಸೇವಾ ಪ್ರತಿನಿಧಿ ಪವಿತ್ರ ಮಂಜುಳಾ ಉಪಸಿತರಿದ್ದರು.ಮತ್ತು ಶನಿವಾರ ಸಂತೆ ವಲಯದ ಮೇಲ್ವಿಚಾರಕರು ಅಚ್ಚುತ್ತ ಇತರರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
