200 ಬಡ ಪ್ರತಿಭೆಗಳಿಗೆ ₹10,000 ನೆರವು; ಎ.ಕೆ. ಸುಬ್ಬಯ್ಯ ಟ್ರಸ್ಟ್‌ನಿಂದ ವಿದ್ಯಾರ್ಥಿವೇತನ ವಿತರಣೆ
admincoorgdaily

ವಿರಾಜಪೇಟೆ:ಕೊಡಗು ಜಿಲ್ಲೆಯಲ್ಲಿ ಪಿಯುಸಿ ತೇರ್ಗಡೆ ಹೊಂದಿದ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ನೀಡಲಾಗುವ ವಿದ್ಯಾರ್ಥಿವೇತನವನ್ನು ಇಂದು ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.
ಈ ವರ್ಷ ಸುಮಾರು 40 ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಬಳಿಕ ಮಾತನಾಡಿದ ದತ್ತಿನಿಧಿ ದಾನಿಗಳು, ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, ಮಕ್ಕಳಿಗೆ ಸ್ಫೂರ್ತಿ ತುಂಬುವ ಕೆಲಸ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕು. ಕಷ್ಟ ಎಂಬುದು ಪ್ರಕೃತಿ ನಿಯಮ, ಅದನ್ನು ಜೀರ್ಣಿಸಿಕೊಂಡು ಮುಂದೆ ಸಾಗಬೇಕು. ನಿಮ್ಮ ಭವಿಷ್ಯಕ್ಕೆ ನೆಲೆ ರೂಪಿಸಿಕೊಳ್ಳಬೇಕು. ಸಾಧಿಸುವ ಛಲ, ಹಠ ಇರಬೇಕು. ಸಿಕ್ಕ ಅವಕಾಶ ಬಳಸಿಕೊಂಡು ಯಶಸ್ವಿಯಾದರೆ ನಿಮ್ಮ ಕುಟುಂಬಕ್ಕೆ, ಊರಿಗೆ, ಸಮಾಜಕ್ಕೆ ದಾರಿ ತೋರಿದಂತೆ ಆಗುತ್ತದೆ. ಸವಾಲನ್ನು ಎದುರಿಸಿ ಭವಿಷ್ಯ ರೂಪಿಸುವ ಶಕ್ತಿ ನಿಮ್ಮಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ, ಹಿರಿಯರಾದ ಗಂಗಮ್ಮ, ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಗೀತಾ ಚಂಗಪ್ಪ ಉಪಸ್ಥಿತರಿದ್ದರು.
ಜಿಲ್ಲೆಯಾದ್ಯಂತ ಆಯ್ದ ಅರ್ಹ ಸುಮಾರು 200 ವಿದ್ಯಾರ್ಥಿನಿಯರಿಗೆ ತಲಾ ₹10,000 ವಿದ್ಯಾರ್ಥಿವೇತನ ವಿತರಿಸಲಾಯಿತು.