ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ಶೇ100 ಫಲಿತಾಂಶ

Apr 9, 2026 - 23:13
 0  863
ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿಗೆ ಶೇ100 ಫಲಿತಾಂಶ

ವಿರಾಜಪೇಟೆ : ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಸಂತ ಅನ್ನಮ್ಮ‌ ಪದವಿ ಪೂರ್ವ ಕಾಲೇಜು ಈ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾಗಿದ್ದ ಎಲ್ಲ 229 ವಿದ್ಯಾರ್ಥಿಗಳಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ವಾಣಿಜ್ಯ ವಿಭಾಗದ ನಿಶಿಕ ದೇಚಮ್ಮ ಎಂ.ಎಲ್ 588 ಅಂಕ ಗಳಿಸುವ ಮೂಲಕ ಪ್ರಥಮ‌ ಸ್ಥಾನ‌ಪಡೆದುಕೊಂಡಿದ್ದಾರೆ. ಕೆ.ಜೆ. ಮಾನ್ಯ 584 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಹಾಗೂ ಎಸ್. ಹರ್ಷಿತ 579 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಜೆಸಿಕ ಎನ್.ಎಸ್ 586 ಅಂಕ ಗಳಿಸಿ ಪ್ರಥಮ ಸ್ಥಾನ, ಪಿ.ಕೆ.ರಕ್ಷಿತ್ 575 ದ್ವಿತೀಯ ಸ್ಥಾನ ಹಾಗೂ ತೇಜಸ್ವಿನಿ 572 ಟಿ.ಎಂ ತೃತೀಯ ಸ್ಥಾನ‌ಪಡೆದು ಉತ್ತಮ ಸಾಧನೆ ತೋರಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ 41 ಹಾಗೂ ವಾಣಿಜ್ಯ ವಿಭಾಗದ 48 ವಿದ್ಯಾರ್ಥಿಗಳು ಪ್ರಥಮ‌ ಶ್ರೇಣಿಯಲ್ಲಿ, ವಿಜ್ಞಾನ ವಿಭಾಗದ 49, ವಾಣಿಜ್ಯ ವಿಭಾಗದ 78 ಪ್ರಥಮ ದರ್ಜೆಯಲ್ಲಿ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 4
Funny Funny 0
Angry Angry 0
Sad Sad 0
Wow Wow 0