ಕುಂಜಿಲ ವಿವಿಧೋದ್ದೇಶ ಸಹಕಾರ ದವಸ ಭಂಡಾರದ 106ನೇ ವಾರ್ಷಿಕ ಮಹಾಸಭೆ
admincoorgdaily

ನಾಪೋಕ್ಲು :ಕುಂಜಿಲ ನಂ.96ನೇ ವಿವಿದೋದ್ದೇಶ ಸಹಕಾರ ದವಸ ಬಂಢಾರದ 2025-26 ನೇಸಾಲಿನ 106ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕಕ್ಕಬ್ಬೆಯಲ್ಲಿ ನಡೆಯಿತು.
ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಕಲ್ಯಾಟಂಡ.ಎ.ರಘು ತಮ್ಮಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 2025-26ನೇ ಸಾಲಿನ ಕಾರ್ಯ ಕಲಾಪಗಳ ವಿವರಣೆಗಳನ್ನು ನೀಡಿದರು.ಸಂಘದಲ್ಲಿ ಹಾಲಿ 234 ಜನ ಸದಸ್ಯರಿದ್ದು ಅತಿ ಹೆಚ್ಚು ಯುವ ಜನರು ಭಾಗವಹಿಸಿ ಸಂಘದ ಸದಸ್ಯತ್ವವನ್ನು ಪಡೆದುಕೊಂಡು ನಮ್ಮ ಹಿರಿಯರು ದೂರ ದೃಷ್ಟಿ ಇಟ್ಟು ಸ್ಥಾಪಿಸಿದ 106 ವರ್ಷ ಇತಿಹಾಸವುಳ್ಳ ದವಸ ಭಂಡಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಹಕಾರ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಸಂಘದಲ್ಲಿ 15ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಎಂ. ಕುಂಞಪ್ಪನವರಿಗೆ ಹಿರಿಯ ಸದಸ್ಯರಾದ ಕೆ.ಕೆ.ಮುತ್ತಪ್ಪನವರು ಸನ್ಮಾನಿಸಿ ಗೌರವಿಸಿದರು. ನೂತನಕಾರ್ಯದರ್ಶಿಯಾಗಿ ಯಶೋಧ ಅವರನ್ನು ನೇಮಿಸಲಾಯಿತು.ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಾದ ಸಹನಾ ಹಾಗೂ ಗೀತಾ ಪೊನ್ನಣ್ಣ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಪಿ.ವಿ. ಕೃಷ್ಣಯ್ಯ,ನಿರ್ದೇಶಕರಾದ ಎಂ.ಎ.ಚೇತನ್,ಕೆ.ಸಿ. ಪಳಂಗಪ್ಪ,ಕೆ.ಎನ್.ನಾಣಯ್ಯ,ಕೆ.ಎ.ಕಾಳಪ್ಪ,ಎನ್.ಎಂ. ಸುಬ್ರಮಣಿ,ಕೆ.ಕೆ.ಅಯ್ಯಪ್ಪ, ಪಿ.ಎಂ.ಸೋಜಾ,ಎ.ಎ.ಡಾಟಿ ಅಯ್ಯಪ್ಪ,ಕೆ.ಟಿ.ಅರುಣ, ಮತ್ತಿತರರು ಉಪಸ್ಥಿತರಿದ್ದರು
ಸಂಘದ ನಿರ್ದೇಶಕಿ ಡಾಟಿ ಅಯ್ಯಪ್ಪ ಪ್ರಾರ್ಥಿಸಿ,ಯಶೋಧ ಸ್ವಾಗತಿಸಿ,ಕೆ.ಎಸ್.ನಾಣಯ್ಯಸರ್ವರನ್ನು ವಂದಿಸಿದರು.