ಜೂ.21ರಂದು ಕಾವೇರಿ ಹಾಲ್‌ನಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Jun 11, 2026 - 18:40
 0  114
ಜೂ.21ರಂದು ಕಾವೇರಿ ಹಾಲ್‌ನಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

 ಮಡಿಕೇರಿ: ಜೂ.21ರಂದು ನಗರದ ಕಾವೇರಿ ಹಾಲ್‌ನಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿ.ಪಂಚಾಯತ್, ನೀಮಾ ಕೊಡಗು ಸಹಯೋಗದಲ್ಲಿ ಅಂದು ಬೆಳಗ್ಗೆ 6.45ಕ್ಕೆ ಉದ್ಘಾಟನೆ, 7 ರಿಂದ 8ರವರೆಗೆ ಯೋಗ ಪ್ರಾತ್ಯಕ್ಷಿಕೆ ಇರಲಿದೆ. ಜೂ.16ರಂದು ಬೆಳಗ್ಗೆ 8.30ಕ್ಕೆ ಗಾಂಧಿಮೈದಾನದಿಂದ ಯೋಗ ಜಾಥಾ, ಜೂ.19ರಂದು ಸಂಜೆ 5ಕ್ಕೆ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಪೂರ್ವಾಭ್ಯಾಸ ನಡೆಯಲಿದೆ. ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಾ.ಅರುಣ್,ಯೋಗ ಶಿಕ್ಷಕ ಕೆ.ಕೆ.ಮಹೇಶ್ ಕುಮಾರ್, ನೀಮಾ ಜಿಲ್ಲಾಧ್ಯಕ್ಷ ರಾಜರಾಮ್, ಸುಧಾಕರ, ಕಾರ್ಯಪ್ಪ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0