ಕುಶಾಲನಗರದಲ್ಲಿ 14 ಗ್ರಾಂ MDMA ವಶ: ಓರ್ವನ ಬಂಧನ
admincoorgdaily

ಮಡಿಕೇರಿ, ಸೆ.09: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಖಚಿತ ಮಾಹಿತಿ ಮೇರೆಗೆ ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೇ ಮಾರ್ಕೆಟ್ ರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು, ದಿನಾಂಕ 06-09-2026 ರಂದು ಆರೋಪಿ ಶಫೀಕ್ (27 ವರ್ಷ), ಮಾದಾಪುರ, ಸೋಮವಾರಪೇಟೆ ತಾಲ್ಲೂಕು ಎಂಬಾತನನ್ನು 14 ಗ್ರಾಂ MDMA ಸಮೇತ ಬಂಧಿಸಿದ್ದಾರೆ.
ಆರೋಪಿಯಿಂದ ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಮೊ.ಸಂ: 125/2026, ಕಲಂ: 20, 22(c) NDPS Act ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ಉಪವಿಭಾಗದ ಡಿಎಸ್‌ಪಿ ಚಂದ್ರಶೇಖರ್, ಕುಶಾಲನಗರ ಟೌನ್ ಪಿಐ ಪ್ರದೀಪ್ ಬಿ.ಆರ್, ಮಡಿಕೇರಿ ಗ್ರಾಮಾಂತರ ಪಿಐ ಗೀತಾ ಹೆಚ್.ಟಿ, ಕುಶಾಲನಗರ ಟೌನ್ ಪಿಎಸ್‌ಐ ಸುನೀಲ್ ಕುಮಾರ್ ಎಂ.ಎಲ್ ಹಾಗೂ ಜಿಲ್ಲೆಯ ಡಿಸಿಆರ್‌ಬಿ ಸಿಬ್ಬಂದಿ ನಿರಂಜನ್ ಎಂ.ಎಸ್, ಪ್ರವೀಣ್ ಬಿ.ಕೆ, ರಾಜೇಶ್ ಸಿ.ಕೆ, ಶರತ್ ಆರ್.ಬಿ.ಜೆ ಭಾಗಿಯಾಗಿದ್ದರು.
ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಸಿಸಲಾಗಿದೆ.