7ನೇ ತರಗತಿ ಬಾಲಕಿಯಿಂದ 15 ಯೋಗ ದಾಖಲೆ : ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸಿಂಚನ ಟಾರ್ಗೆಟ್!
admincoorgdaily

ಮಡಿಕೇರಿ: ಕೇವಲ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು 15 ಯೋಗ ದಾಖಲೆಗಳನ್ನು ಬರೆದು ಈಗ 3 ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಪ್ರಯತ್ನಿಸುತ್ತಿದ್ದಾಳೆ.
ಮದೆ ಗ್ರಾಮದ ಯೋಗಪಟು ಸಿಂಚನ ಡಿಂಬಾಸನ, ಧನುರಾಸನದಲ್ಲಿ 5 ನಿಮಿಷ ಸತತ ಚಲನೆ ಹಾಗೂ 1 ನಿಮಿಷದಲ್ಲಿ 10ಕ್ಕೂ ಹೆಚ್ಚು ಬಾರಿ ಸುಪ್ತ ಡಿಂಬಾಸನ ಮಾಡಿ ದಾಖಲೆ ನಿರ್ಮಿಸಲಿದ್ದಾಳೆ ಎಂದು ತಾಯಿ ರೇಣುಕಾ ಕೀರ್ತಿಕುಮಾರ್ ತಿಳಿಸಿದರು.
ಈ ಅಪರೂಪದ ಸಾಧನೆಗೆ ಮನ್ನಣೆ ನೀಡಲು ಸೆ.25ರಂದು ದೇವರಕೊಲ್ಲಿ ಚಾಮುಂಡೇಶ್ವರಿ ಕಲಾಮಂದಿರದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ ಉದ್ಘಾಟಿಸಲಿದ್ದು, ಮಂಥರ್ ಗೌಡ, ಬೋಪಯ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಧನಂಜಯ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯೋಗ ಗುರು ಮಹೇಶ್, ನಿವೃತ್ತ ಶಿಕ್ಷಕ ಶಿವರಾವ್, ಪ್ರಮುಖರಾದ ಬಿ.ಜೆ.ಯಶೋಧರ, ಯೋಗಪಟು ಸಿಂಚನ ಇದ್ದರು.