Kodagu

ಕೆಎಸ್‌ಸಿಎ ಮಂಗಳೂರು ವಲಯದ 15 ವರ್ಷದೊಳಗಿನ ಮಹಿಳಾ ಕ್ರಿಕೆಟ್ ತಂಡಕ್ಕೆ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಆಯ್ಕೆ

admincoorgdaily

ಕೆಎಸ್‌ಸಿಎ ಮಂಗಳೂರು ವಲಯದ 15 ವರ್ಷದೊಳಗಿನ ಮಹಿಳಾ ಕ್ರಿಕೆಟ್ ತಂಡಕ್ಕೆ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಆಯ್ಕೆ
ಮಡಿಕೇರಿ, ಅ. 23: ಕೊಡಗು ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿನಿ ಹಿತಪ್ರಿಯಾ ಪಿ. ಎಸ್. ಅವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) 15 ವರ್ಷದೊಳಗಿನ ಮಹಿಳಾ ಮಂಗಳೂರು ವಲಯದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.

ಕೆಎಸ್‌ಸಿಎ ಆಯೋಜಿಸಿದ್ದ ಮಂಗಳೂರು ವಲಯದ ಆಯ್ಕೆ ಪ್ರಕ್ರಿಯೆ ಹಾಗೂ ವಲಯಮಟ್ಟದ ತರಬೇತಿ ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿತಪ್ರಿಯಾ, ಮಂಗಳೂರು ವಲಯದ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಗಳಿಸಿದ್ದಾರೆ.
ಅಕ್ಟೋಬರ್ 23ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕೆಎಸ್‌ಸಿಎ ರಾಜ್ಯಮಟ್ಟದ ಅಂತರ ವಲಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಮಂಗಳೂರು ವಲಯದ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಹಿತಪ್ರಿಯಾ ಅವರು ಮರಗೋಡು ಗ್ರಾಮದ ಕೃಷಿಕ ದಂಪತಿ ಶರತ್ ಮತ್ತು ಸೋನಿಯಾ ಅವರ ಪುತ್ರಿ. ಇವಳನ್ನು ಶಾಲಾ ಶಿಕ್ಷಕಿ ದಿವ್ಯಾ ಎ. ಜೆ. ತರಬೇತು ಗೊಳಿಸಿರುತ್ತಾರೆ ಎಂದು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಕೆ. ಎಸ್.ತಿಳಿಸಿದ್ದಾರೆ.