ಮಗುವಿಗೆ ಜನ್ಮ ನೀಡಿದ 16ರ ಬಾಲಕಿ; ಸಂಬಂಧಿಕನಿಂದಲೇ ದೌರ್ಜನ್ಯ, ಆರೋಪಿ ಬಂಧನ

Dec 1, 2025 - 23:29
 0  1.3k
ಮಗುವಿಗೆ ಜನ್ಮ ನೀಡಿದ 16ರ ಬಾಲಕಿ; ಸಂಬಂಧಿಕನಿಂದಲೇ ದೌರ್ಜನ್ಯ, ಆರೋಪಿ ಬಂಧನ

ತುಮಕೂರು, ಡಿ 1: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ಸಂಬಂಧಿಕನಿಂದ ನಿರಂತರ ದೌರ್ಜನ್ಯಕ್ಕೊಳಗಾಗಿ 16 ವರ್ಷದ ಶಾಲಾ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿರುವ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ. 

ಪೋಷಕರ ದೂರು ಸ್ವೀಕರಿಸಿದ ಹುಲಿಯೂರುದುರ್ಗ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿ ಮಲ್ಲೇಶ್‌ (35)ನನ್ನು ಬಂಧಿಸಿದ್ದಾರೆ.

ಆಗಸ್ಟ್‌ನಲ್ಲಿ ಬಾಲಕಿಯ ಆರೋಗ್ಯದಲ್ಲಿ ಅನುಮಾನಾಸ್ಪದ ಬದಲಾವಣೆ ಕಂಡುಬಂದಿದ್ದರಿಂದ ಪೋಷಕರು ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಬಾಲಕಿ ಈಗಾಗಲೇ ಏಳು ತಿಂಗಳು ಗರ್ಭಿಣಿಯಾಗಿರುವುದು ಹೊರಬಿದ್ದಿದೆ. ವಿಚಾರಣೆ ವೇಳೆ ಸಂಬಂಧಿಕನಾದ ಮಲ್ಲೇಶ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂಬುದು ದೃಢಪಟ್ಟಿದೆ.

ತಪಾಸಣೆ ನಡೆದ ಕೆಲವೇ ದಿನಗಳಲ್ಲಿ, ನವೆಂಬರ್‌ 18ರಂದು ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಾಲಕಿ ಹಾಗೂ ನವಜಾತ ಶಿಶುವನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ. 

ಸದ್ಯ, ಬಂಧಿತ ಮಲ್ಲೇಶ್‌ ವಿರುದ್ಧ ಪೊಕ್ಸೋ ಕಾಯ್ದೆಯಡಿ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 2
Sad Sad 0
Wow Wow 0