ರಾಫೆಲ್ಸ್ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಸಾಧನೆ: ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 18 ಬಹುಮಾನ
admincoorgdaily


ಮಡಿಕೇರಿ;
ಸಮೂಹ ಸಂಪನ್ಮೂಲ ಕೇಂದ್ರ ಮೂರ್ನಾಡು, ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ನಾಪೋಕ್ಲು ಸಮೀಪದ ಹೊದವಾಡದ ರಾಫೆಲ್ಸ್ ಇಂಟರ್ ನ್ಯಾಷನಲ್ ಇಂಗ್ಲಿಷ್ ಶಾಲೆ ಮತ್ತು ಪದವಿ ಪೂರ್ವ ಕಾಲೇಜುನಲ್ಲಿ ನಡೆದ ಮೂರ್ನಾಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ರಾಫೆಲ್ಸ್ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
2026-27ನೇ ಸಾಲಿನ ಸ್ಪರ್ಧೆಯಲ್ಲಿ ರಾಫೆಲ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಒಟ್ಟು 18 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದು, 7 ಪ್ರಥಮ, 6 ದ್ವಿತೀಯ ಮತ್ತು 5 ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.
ಪ್ರಥಮ ಬಹುಮಾನ ಪಡೆದ ರಾಫೆಲ್ಸ್ ವಿದ್ಯಾರ್ಥಿಗಳು:
ರಂಶೀದ್ ಎಂ.ಎಸ್ (ದ್ವಿತೀಯ ಪಿಯುಸಿ) - ಧಾರ್ಮಿಕ ಪಠಣ, ಸಿ.ಯು. ಮನ್ಸೂರ್ (ದ್ವಿತೀಯ ಪಿಯುಸಿ) - ಚರ್ಚಾ ಸ್ಪರ್ಧೆ ಮತ್ತು ಕನ್ನಡ ಭಾಷಣ, ರನಾ ಫಾತಿಮಾ ಎಂ.ಕೆ (4ನೇ ತರಗತಿ) - ಅಭಿನಯ ಗೀತೆ, ಫೈಜಾನ್ ಕೆ.ಎಂ (1ನೇ ತರಗತಿ) - ಇಂಗ್ಲಿಷ್ ಕಂಠಪಾಠ, ಮೊಹಮ್ಮದ್ ಯಾಸೀನ್ (4ನೇ ತರಗತಿ) - ಕಥೆ ಹೇಳುವುದು, ಮೊಹಮ್ಮದ್ ಆದಿಲ್ (ಪ್ರಥಮ ಪಿಯುಸಿ) - ಗಜಲ್.
ದ್ವಿತೀಯ ಬಹುಮಾನ: ಕವಾಲಿ ತಂಡ (ಪ್ರಥಮ ಪಿಯುಸಿ), ಜಾನಪದ ನೃತ್ಯ ತಂಡ, ಸನಾ ನಸ್ರೀನ್ (3ನೇ ತರಗತಿ) ಛದ್ಮವೇಷ, ಆರ್ಶಿಯಾ ಎಂ.ಎ (6ನೇ ತರಗತಿ) - ಕಥೆ ಹೇಳುವುದು, ಆಶು ಭಾಷಣ ಸುಹೇಲ್ ಬಿ.ಬಿ (ಪ್ರಥಮ ಪಿಯುಸಿ) -
ತೃತೀಯ ಬಹುಮಾನ: ಉಮೈರ್ ಬಿ.ಎ (6ನೇ ತರಗತಿ) - ಧಾರ್ಮಿಕ ಪಠಣ, ರೆಹಮಾನ್ (4ನೇ ತರಗತಿ) - ಹಿಂದಿ ಕಂಠಪಾಠ ಹಮ್ದಾನ್ (4ನೇ ತರಗತಿ), ಜೇಡಿಮಣ್ಣಿನ ಮಾದರಿ, ಮೊಹಮ್ಮದ್ ಸಾಬಿತ್, ಫಾತಿಮತ್ ವಫಾ,ಮೊಹಮ್ಮದ್ ಸಾಬಿತ್ ದೇಶಭಕ್ತಿ ಗೀತೆ, ಶಂವೀಲ್ ಎಂ.ಎ (6ನೇ ತರಗತಿ) - ಮಿಮಿಕ್ರಿ.
ವಿಜೇತ ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.