ಮಲ್ಲಳ್ಳಿ ಜಲಪಾತದಲ್ಲಿ 2 ಕಾಲೇಜು ವಿದ್ಯಾರ್ಥಿಗಳ ರಕ್ಷಣೆ; ನೀರಿಗೆ ಇಳಿದು ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Jul 6, 2026 - 21:59
Jul 6, 2026 - 22:11
 0  425
ಮಲ್ಲಳ್ಳಿ ಜಲಪಾತದಲ್ಲಿ 2 ಕಾಲೇಜು ವಿದ್ಯಾರ್ಥಿಗಳ ರಕ್ಷಣೆ; ನೀರಿಗೆ ಇಳಿದು ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಸೋಮವಾರಪೇಟೆ:- ಮಲ್ಲಳ್ಳಿ ಜಲಪಾದಲ್ಲಿ ಪ್ರವಾಸಿಗರ ಹುಚ್ಚಾಟ,ಜಲ ದಿಗ್ಬಂಧನಕ್ಕೆ ಸಿಲುಕಿದ ಇಬ್ಬರು ಬದುಕಿದ್ದೆ ಹೆಚ್ಚು.

ತಾಲೂಕಿನ ಪ್ರವಾಸಿ ತಾಣ ಮಲ್ಲಳ್ಳಿ ಸುತ್ತಮುತ್ತಲಲ್ಲಿ ಮಳೆ ಬಿರುಸುಗೊಳ್ಳುತಿರುವ ಹಿನ್ನಲೆಯಲ್ಲಿ ಜಲಪಾತದಲ್ಲಿ ನೀರು ಹೆಚ್ಚಾಗುತ್ತಿದೆ ಅಲ್ಲದೆ ಮೇಲ್ಭಾಗದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕದಿಂದ ಹೆಚ್ಚಿನ ನೀರು ಹೊರಬಿಡುವ ಅರಿವಿಲ್ಲದ ಇಬ್ಬರು ಯುವಕರು ಇಂದು ಮಧ್ಯಾಹ್ನ ಪೋಟೋ ತೆಗೆಯಲು ಜಲಪಾತದ ಮಧ್ಯದಲ್ಲಿರುವ ಬಂಡೆಯೇರಿ ಕುಳಿತಿದ್ದಾರೆ ಇದೇ ಸಂದರ್ಭ ನೀರಿನ ಹರಿವು ಹೆಚ್ಚಾಗಿ ಅಪಾಯಕ್ಕೆ ಸಿಲುಕಿದ್ದಾರೆ.

ಇದನ್ನ ಗಮನಿಸಿದ ಇತರೆ ಪ್ರವಾಸಿಗರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಗಳು ಎರೆಡು ಜೀವಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0