Kodagu

ಮಡಿಕೇರಿ ದಸರಾಕ್ಕೆ 2 ಕೋಟಿ ರೂಪಾಯಿ ಅನುದಾನ

admincoorgdaily

ಮಡಿಕೇರಿ ದಸರಾಕ್ಕೆ 2 ಕೋಟಿ ರೂಪಾಯಿ ಅನುದಾನ

ಮಡಿಕೇರಿ: ಮಡಿಕೇರಿ ಕ್ಷೇತ್ರದ ಶಾಸಕರಾದ ಮಂತರ್ ಗೌಡರ ನೇತೃತ್ವದಲ್ಲಿ ನಗರ ದಸರಾ ಸಮಿತಿಯಿಂದ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ರವರನ್ನು ಭೇಟಿ ಮಾಡಿ ಮಡಿಕೇರಿ ದಸರಾಕ್ಕೆ ಅನುದಾನ ಕೋರಿದ ತಕ್ಷಣವೇ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿ ಗಳು,2 ಕೋಟಿ ರೂ ಘೋಷಣೆ ಮಾಡಿದ್ದಾರೆ.

 ನಿಯೋಗ ದಲ್ಲಿ ಮಡಿಕೇರಿ ದಸರಾ ಸಮಿತಿಯ ಉಪಾಧ್ಯಕ್ಷರು, ನಗರ ದಸರಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮಹೇಶ್ ಜೈನಿ, ದಸರಾ ಕಾರ್ಯಧ್ಯಕ್ಷ ಬಿ ಕೆ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬೀತ, ಕಾರ್ಯದರ್ಶಿ ಮುದ್ದುರಾಜ್, ದಸರಾ ವೇದಿಕೆ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಆರ್ ಪಿ., ಅಲಂಕಾರ ಸಮಿತಿ ಅಧ್ಯಕ್ಷ ಮುನಿರ್ ಮಾಚಾರ್, ಯುವ ದಸರಾ ಅಧ್ಯಕ್ಷ ಕವನ ಕೊತ್ತೊಳಿ, ದಶ ಮಂಟಪ ಸಮಿತಿ ಅಧ್ಯಕ್ಷರಾದ ಪೂಣಚ್ಚಣ ಪ್ರಧಾನ ಕಾರ್ಯದರ್ಶಿ ವಿನೋದ್, ಪ್ರಕಾಶ್ ಆಚಾರ್ಯ, ಕಾರ್ಯ ದರ್ಶಿ ಮೋಹನ್ ಗಜೇಂದ್ರ, ಜಗದೀಶ್ ಸೇರಿದಂತೆ ದಸರಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.