PMO ಕಚೇರಿಯ ಉನ್ನತಾಧಿಕಾರಿ, ಅಮಿತ್ ಶಾ ದತ್ತು ಪುತ್ರ ಎಂದು ನಂಬಿಸಿ 2.7 ಕೋಟಿ ವಂಚನೆ!

Nov 24, 2025 - 20:26
 0  494
PMO ಕಚೇರಿಯ ಉನ್ನತಾಧಿಕಾರಿ,  ಅಮಿತ್ ಶಾ ದತ್ತು ಪುತ್ರ ಎಂದು ನಂಬಿಸಿ 2.7 ಕೋಟಿ ವಂಚನೆ!
Photo credit:Asiant news

ಬೆಂಗಳೂರು, ನ.24: ಪ್ರಧಾನಮಂತ್ರಿ ಕಚೇರಿಯ (PMO) ಉನ್ನತ ಅಧಿಕಾರಿಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರನೂ ಆಗಿರುವುದಾಗಿ ನಂಬಿಸಿ ವೈದ್ಯರಿಂದ 2.7 ಕೋಟಿ ರೂಪಾಯಿ ಹಣ ವಂಚಿಸಿದ ಸುಜಯೇಂದ್ರ ಎಂಬ ವ್ಯಕ್ತಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ನಿವಾಸಿ ಸುಜಯೇಂದ್ರ, ಜಮ್ಮು–ಕಾಶ್ಮೀರ ಮೂಲದ ವೈದ್ಯರನ್ನು ಸಂಪರ್ಕಿಸಿ ಪಿಎಂಒ ಅಧಿಕಾರಿಯೆಂದು ಹೇಳಿಕೊಂಡಿದ್ದಾನೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೆ ವೇದಿಕೆ ಹಂಚಿಕೊಂಡಿರುವ ಫೋಟೋಗಳನ್ನು ತೋರಿಸಿ ವಿಶ್ವಾಸ ಪಡೆದಿದ್ದಾನೆ ಎಂದು ಎಂದು ತಿಳಿದು ಬಂದಿದೆ.

ದೇವನಹಳ್ಳಿ ಸಮೀಪ ‘ವಿಲ್ಲಾ ಮಾದರಿ’ ಅತ್ಯಾಧುನಿಕ ಆಯುರ್ವೇದ ಆಸ್ಪತ್ರೆ ಸ್ಥಾಪನೆಗೆ ಸರ್ಕಾರದಿಂದ ಅನುಮತಿ ಮಾಡಿಕೊಡುತ್ತೇನೆ ಎಂದು ಆಮಿಷವೊಡ್ಡಿ, ಹಂತ ಹಂತವಾಗಿ ಹಣ ಪಡೆದುಕೊಂಡಿರುವುದು ತನಿಖೆಯಲ್ಲಿ ಬಯಲಾಗಿದೆ.

ದೂರು ಸ್ವೀಕರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಯು ಎರಡು ಬಾರಿ ಜೈಲು ಪಾಲಾಗಿರುವ ಹಳೆಯ ಅಪರಾಧಿ ಎನ್ನುವುದೂ, ಆತನ ವಿರುದ್ಧ ನಾಲ್ಕು ಚೆಕ್ ಬೌನ್ಸ್ ಪ್ರಕರಣಗಳೂ ದಾಖಲಾಗಿರುವುದೂ ಬೆಳಕಿಗೆ ಬಂದಿದೆ.

ಇಷ್ಟೊಂದು ಹಿಂದಿನ ದಾಖಲೆಗಳಿದ್ದರೂ ರಾಜಕೀಯ ನಾಯಕರೊಂದಿಗೆ ಸ್ಟೇಜ್ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ. ಪ್ರಕರಣವನ್ನು ವಿಜಯನಗರ ಪೊಲೀಸರು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0