ಹಾರಂಗಿ ಜಲಾಶಯದಿಂದ ನದಿಗೆ 20,000 ಕ್ಯೂಸೆಕ್ಸ್ ನೀರು ಬಿಡುಗಡೆ: ಕೆಳಭಾಗದ ಸೇತುವೆ ಮುಳುಗಡೆ,ಸೇತುವೆ ಮೇಲೆ ವಾಹನ ಸಂಚಾರ
admincoorgdaily

ಕುಶಾಲನಗರ, ಆ.1 : ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿರುವ ಕಾರಣದಿಂದ ಅಣೆಕಟ್ಟೆಯಿಂದ ಈ ಸಂಜೆ 20,000 ಕ್ಯೂ .ಸೆ ನೀರನ್ನು ನದಿಗೆ ಹರಿಸುತ್ತಿದ್ದು, ಅಣೆಕಟ್ಟೆಯ ಕೆಳಭಾಗದ ಸೇತುವೆ ಮುಳುಗಡೆಗೊಳ್ಳುತ್ತಿದ್ದರೂ ಹಲವರು ಅದರ ಮೇಲೆ ವಾಹನಗಳು ಚಲಿಸುತ್ತಿದ್ದು ಇದರ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ವಾಹನಗಳು ಸೇತುವೆಯಲ್ಲಿ ಹರಿಯುತ್ತಿರುವ ನೀರಿನ ಮೇಲೆ ಸಾಗುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ.