ನಾಳೆ ಕೊಡಗು ಜಿಲ್ಲೆಯ 200 ಖಾಸಗಿ ಮೆಡಿಕಲ್ ಶಾಪ್ ಗಳು ಬಂದ್

May 19, 2026 - 17:39
 0  822
ನಾಳೆ ಕೊಡಗು ಜಿಲ್ಲೆಯ 200 ಖಾಸಗಿ ಮೆಡಿಕಲ್ ಶಾಪ್ ಗಳು ಬಂದ್

ಮಡಿಕೇರಿ: ಆನ್‌ಲೈನ್ ಔಷಧ ಮಾರಾಟ ನಿಲ್ಲಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆ ನೀಡಿರುವ ಬಂದ್‌ಗೆ ಬೆಂಬಲ ಸೂಚಿಸಿ ಮೇ 30ರಂದು ಕೊಡಗು ಜಿಲ್ಲೆಯ 200 ಖಾಸಗಿ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ ಎಂದು ಜಿಲ್ಲಾ ಕೆಮಿಸ್ಟ್ಸ್ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ತಿಳಿಸಿದ್ದಾರೆ.

 ಕೋವಿಡ್ ವೇಳೆ ನೀಡಿದ್ದ ತಾತ್ಕಾಲಿಕ ಅನುಮತಿಯನ್ನು ಸರ್ಕಾರ ಇನ್ನೂ ಹಿಂಪಡೆದಿಲ್ಲ. ಆನ್‌ಲೈನ್ ಮಾರಾಟದಿಂದ ಕಳಪೆ, ನಕಲಿ ಔಷಧ, ಮಾಹಿತಿ ಸೋರಿಕೆ ಸಮಸ್ಯೆಯಿದೆ. ಶೇ೧೬-೨೦ ಲಾಭಾಂಶ ಮಾತ್ರ ಸಿಗುತ್ತಿದ್ದು ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ತಿಲಕ್, ಪುರುಷೋತ್ತಮ್, ವಸಂತ ಕುಮಾರ್, ಪ್ರಸಾದ್ ಗೌಡ, ವಿನೋದ್ ಇದ್ದರು.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0