Kodagu

ಗೋಣಿಕೊಪ್ಪ ಶ್ರೀ ಕಾವೇರಿ ದಸರಾ - 2026: 48ನೇ ವರ್ಷದ ದಸರಾ ಜನೋತ್ಸವಕ್ಕೆ ವಿಧ್ಯುಕ್ತ ಚಾಲನೆ

admincoorgdaily

ಗೋಣಿಕೊಪ್ಪ ಶ್ರೀ ಕಾವೇರಿ ದಸರಾ - 2026: 48ನೇ ವರ್ಷದ ದಸರಾ ಜನೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಗೋಣಿಕೊಪ್ಪ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕಾವೇರಿ ದಸರಾ ಸಮಿತಿ ಸಹಯೋಗದಲ್ಲಿ ಆಯೋಜಿಸಿರುವ 48ನೇ ವರ್ಷದ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಜನೋತ್ಸವಕ್ಕೆ ಇಂದು ವಿಧ್ಯುಕ್ತ ಚಾಲನೆ ನೀಡಲಾಯಿತು.

ಗೋಣಿಕೊಪ್ಪದ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಪೂಜಾ ಕೈಂಕರ್ಯಗಳೊಂದಿಗೆ ದೇವಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಲಾಯಿತು.

ಶ್ರೀ ಕಾವೇರಿ ದಸರಾ ಜನೋತ್ಸವ ಸಮಿತಿ ಅಧ್ಯಕ್ಷರು, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಕ್ಷೇತ್ರದ ಜನಪ್ರಿಯ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ದಸರಾ ಜನೋತ್ಸವಕ್ಕೆ ಚಾಲನೆ ನೀಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ದೇವಿಯ ವಿಗ್ರಹವನ್ನು ಕೇಶವ್ ಕಾಮತ್ ಕುಟುಂಬಸ್ಥರು ನೀಡಿದ್ದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂಜನಾ, ದಸರಾ ಜನೋತ್ಸವದ ಕಾರ್ಯಾಧ್ಯಕ್ಷ ಪ್ರಮೋದ್ ಗಣಪತಿ, ಉಪಾಧ್ಯಕ್ಷ ಶಿವಾಜಿ, ಪ್ರಧಾನ ಸಂಚಾಲಕ ಬಿ.ಎನ್. ಪ್ರಕಾಶ್, ಮಂಜುಳಾ, ದಿಲನ್ ಚಂಗಪ್ಪ, ಕೇಶವ ಕಾಮತ್, ಚಂದನ್ ಕಾಮತ್, ಚಂದನ ಮಂಜುನಾಥ್, ವರಮಹಾಲಕ್ಷ್ಮಿ, ಸಪ್ತಶ್, ಎಂ.ಜಿ. ಮೋಹನ್, ಓಮನ, ಶೋಭಿತ್, ನೂರೇರ ಧನ್ಯ, ಅಣ್ಣಪ್ಪ, ಪ್ರಮೋದ್ ಕಾಮತ್, ತೆರೇಸಾ ವಿಕ್ಟರ್, ಅಂಕಿತ್ ಪೊನ್ನಪ್ಪ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.