ಕೈಲ್ ಮುಹೂರ್ತ ಜಂಬರ-2026ಕ್ಕೆ ಶಾಸಕ ಪೊನ್ನಣ್ಣಗೆ ಆಹ್ವಾನ
admincoorgdaily

ಬೆಂಗಳೂರು:ಅ.4 ರಂದು ಕೊಡಗು ಗೌಡ ಸಮಾಜ ಸಭಾಂಗಣ, ಉಳ್ಳಾಲು, ಬೆಂಗಳೂರಿನಲ್ಲಿ ನಡೆಯಲಿರುವ ಕೈಲ್ ಮುಹೂರ್ತ ಜಂಬರ -2026ರ ಸಂಭ್ರಮಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಆಹ್ವಾನಿಸಲಾಯಿತು.
ಇಂದು ವಿಧಾನಸೌಧದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಕೊಡಗು ಗೌಡ ಸಮಾಜ (ರಿ) ಬೆಂಗಳೂರು ಪದಾಧಿಕಾರಿಗಳು ಆಹ್ವಾನ ಪತ್ರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ವಿಂಗ್ ಕಮಾಂಡರ್ ಅಯ್ಯಟೀರ ಮನೋಜ್ ಕುಮಾರ್, ಉಪಾಧ್ಯಕ್ಷ ಕುದುಪಜೆ ಮೋಹನ್, ಗೌರವ ಕಾರ್ಯದರ್ಶಿ ಬೇಕಲ್ ಬಿಪಿನ್, ಜಂಟಿ ಕಾರ್ಯದರ್ಶಿ ಗೋವಿಂದಮ್ಮನ ಪ್ರವೀಣ್ ಕುಮಾರ್, ಸದಸ್ಯ ಕೆ.ಆರ್. ದಿನೇಶ್ ಹಾಗೂ ಕಾನೂನು ಸಲಹೆಗಾರ ನಿಡ್ಡೆಮಲೆ ಪ್ರಕಾಶ್ ಉಪಸ್ಥಿತರಿದ್ದರು.