Kodagu

2027ರ ಕೊಡವ ಹಾಕಿ ಉತ್ಸವ - ಅಜ್ಜಿಕುಟ್ಟಿರ ಕುಟುಂಬಕ್ಕೆ ಆಯೋಜನೆ! ನ.22ಕ್ಕೆ ಬೆಂಗಳೂರಿನಲ್ಲಿ ಲಾಂಛನ ಬಿಡುಗಡೆ

admincoorgdaily

2027ರ ಕೊಡವ ಹಾಕಿ ಉತ್ಸವ - ಅಜ್ಜಿಕುಟ್ಟಿರ ಕುಟುಂಬಕ್ಕೆ ಆಯೋಜನೆ! ನ.22ಕ್ಕೆ ಬೆಂಗಳೂರಿನಲ್ಲಿ ಲಾಂಛನ ಬಿಡುಗಡೆ
ವಿರಾಜಪೇಟೆ: 2027ನೇ ಸಾಲಿನ ಕೊಡವ ಹಾಕಿ ಉತ್ಸವವನ್ನು ಈ ಬಾರಿ ಪ್ರತಿಷ್ಠಿತ ಅಜ್ಜಿಕುಟ್ಟಿರ ಕುಟುಂಬಸ್ಥರು ಆಯೋಜಿಸುತ್ತಿದ್ದು, ಉತ್ಸವದ ಪೂರ್ವಭಾವಿ ಸಭೆಯು ಇಂದು ವಿರಾಜಪೇಟೆಯ ಮಾನ್ಯ ಶಾಸಕರ ಗೃಹ ಕಚೇರಿಯಲ್ಲಿ ನಡೆಯಿತು.

ಹಾಕಿ ಉತ್ಸವದ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಇದೇ ತಿಂಗಳ 22ರಂದು ಬೆಂಗಳೂರಿನ ಹಾಕಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿರುವ ಕೊಡವ ಹಾಕಿ ಉತ್ಸವದ ಲಾಂಛನ ಬಿಡುಗಡೆ ಸಮಾರಂಭದ ಪೂರ್ವಭಾವಿ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಉತ್ಸವದ ರೂಪುರೇಷೆಗಳು, ಕಾರ್ಯಕ್ರಮದ ಆಯೋಜನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಚರ್ಚಿಸಿ ಅಗತ್ಯ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಅಜ್ಜಿಕುಟ್ಟಿರ ಕುಟುಂಬದ ಅಧ್ಯಕ್ಷರಾದ ಸಜನ್ ಚೆಂಗಪ್ಪ, ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡಂಡ ಕೆ. ಬೋಪಣ್ಣ, ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಕಾರ್ಯದರ್ಶಿ ಪೂಣಚ್ಚ, ಕೊಡವ ಹಾಕಿ ಅಕಾಡೆಮಿಯ ಕಾರ್ಯಾಧ್ಯಕ್ಷರಾದ ಒಲಿಂಪಿಯನ್ ಚೆಪ್ಪುಡೀರ ಪೂಣಚ್ಚ, ಕಾರ್ಯದರ್ಶಿ ಕುಲೇಟೀರ ಅರುಣ್ ಬೇಬ, ಸಹ ಕಾರ್ಯದರ್ಶಿ ನಾಯಕಂಡ ದೀಪಕ್ ಚಿನ್ನಪ್ಪ, ನಿರ್ದೇಶಕರಾದ ಕಲಿಯಂಡ ಸಂಪನ್ ಅಯ್ಯಪ್ಪ ಹಾಗೂ ರಾಕಿ ಪೂವಣ್ಣ ಸೇರಿದಂತೆ ಅಜ್ಜಿಕುಟ್ಟಿರ ಕುಟುಂಬದ ಆಯೋಜಕರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕುಟುಂಬದ ಸರ್ವ ಸದಸ್ಯರು ಉಪಸ್ಥಿತರಿದ್ದರು.

---