Kodagu

ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ; ಹಲವು ಕಾರ್ಯಕ್ರಮಗಳ ಆಕರ್ಷಣೆ

admincoorgdaily

ಕತ್ತಲೆಕಾಡು ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ 20ನೇ ವರ್ಷದ ಗೌರಿ ಗಣೇಶೋತ್ಸವ; ಹಲವು ಕಾರ್ಯಕ್ರಮಗಳ ಆಕರ್ಷಣೆ

ಮಡಿಕೇರಿ : ಕತ್ತಲೆಕಾಡು-ಜೇನುಕೊಲ್ಲಿ ಗ್ರಾಮದ ಶ್ರೀ ವಿನಾಯಕ ಸೇವಾ ಟ್ರಸ್ಟ್‌ ವತಿಯಿಂದ ವಿನಾಯಕ ಭಕ್ತ ವೃಂದ ಸಹಯೋಗದಲ್ಲಿ 20ನೇ ವರ್ಷದ ಸಂಭ್ರಮದ ಗೌರಿ ಗಣೇಶೋತ್ಸವ ಕಾರ್ಯಕ್ರಮ ಸೆಪ್ಟೆಂಬರ್‌ 14ರಿಂದ 18ರವರೆಗೆ ನಡೆಯಲಿದೆ.

14ರಂದು ಬೆಳಗ್ಗೆ 5 ಗಂಟೆಗೆ ಟ್ರಸ್ಟ್‌ನ ಆವರಣದಲ್ಲಿ ಗಣಹೋಮ, ಬಳಿಕ ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಬಳಿಕ ಬೆಳಗ್ಗೆ 9:00 ಗಂಟೆಗೆ ಭಾರತ್ ಮಾತಾ ಪೂಜೆ, 10 ಗಂಟೆಗೆ ಸಭಾ ಕಾರ್ಯಕ್ರಮ, ಗ್ರಾಮದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, 11 ಗಂಟೆಗೆ ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ, ಮಧ್ಯಾಹ್ನ 12 ಗಂಟೆಗೆ ಮಹಿಳೆಯರಿಗೆ ಆಟೋಟ ಸ್ಪರ್ಧೆ ಜರುಗಲಿದೆ. ಮ. 1 ಗಂಟೆಗೆ ಅನ್ನದಾನ, 2 ಗಂಟೆಗೆ ಮಕ್ಕಳಿಗೆ ಆಟೋಟ ಸ್ಪರ್ಧೆ, ಸಂಜೆ 07 ಗಂಟೆಗೆ ನಿತ್ಯ ಪೂಜೆ, ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ 08:30ಕ್ಕೆ ಪ್ರಸಾದ ವಿತರಣೆ ಇರಲಿದೆ ಎಂದು ಟ್ರಸ್ಟ್‌ ಪ್ರಕಟಣೆ ತಿಳಿಸಿದೆ.

15ರಂದು ಸಂಜೆ 6 ರಿಂದ 8 ಗಂಟೆವರೆಗೆ ನಾಗದೋಷ ನಿವಾರಣೆಗಾಗಿ ಸಾರ್ವಜನಿಕ ಆಶ್ಲೇಷ ಪೂಜೆ. 8.30ಕ್ಕೆ ಅನ್ನ ಸಂತರ್ಪಣೆ. 16ರಂದು ಸಂಜೆ 6 ರಿಂದ 8 ಗಂಟೆವರೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 08.30ಕ್ಕೆ ಅನ್ನಸಂತರ್ಪಣೆ. 17ರಂದು ಸಂಜೆ 06 ಗಂಟೆಗೆ ಸುಭಾಷ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ, ಸಂಜೆ 07 ಗಂಟೆಗೆ ನಿತ್ಯ ಪೂಜೆ ಹಾಗೂ ವಿದ್ಯಾರ್ಥಿಗಳಿಂದ ಭಜನೆ, ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ.

18ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನಸಂತರ್ಪಣೆ, ಮಧ್ಯಾಹ್ನ 2 ಗಂಟೆಗೆ ಗ್ರಾಮದ ಮುಖ್ಯ ಬೀದಿಯಲ್ಲಿ ಶೋಭಾಯಾತ್ರೆ ಸಾಗಿ, ಬಳಿಕ ಕ್ಲೋಸ್‌ಬರ್ನ್‌ ಕೆರೆಯಲ್ಲಿ ಜಲಸ್ತಂಭನ ಮಾಡಲಾಗುವುದು. ಸಾರ್ವಜನಿಕರು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್‌ ಹಾಗೂ ವಿನಾಯಕ ಭಕ್ತ ವೃಂದ ವಿನಂತಿಸಿದೆ.