ಶನಿವಾರಸಂತೆ: ಮಾಲಂಬಿಯಲ್ಲಿ 21ನೇ ವರ್ಷದ ಗೌರಿ-ಗಣೇಶ ವಿಸರ್ಜನೋತ್ಸವ ಸಂಭ್ರಮ
admincoorgdaily

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಲಂಬಿಯಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 21ನೇ ವರ್ಷದ ಗೌರಿ-ಗಣೇಶ ವಿಸರ್ಜನೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾ.ಪಂ ಮಾಜಿ ಸದಸ್ಯ ಹೆಚ್.ಎಸ್. ಪ್ರೇಮನಾಥ್, ಗ್ರಾಮೀಣ ಭಾಗದಲ್ಲಿ ಇಂತಹ ಆಚರಣೆಗಳಿಂದ ಒಗ್ಗಟ್ಟು ಮೂಡುತ್ತದೆ ಎಂದರು. ಪ್ರಮುಖರಾದ ಎಂ.ಡಿ. ಸುರೇಶ್ ಮಾತನಾಡಿ, ಗ್ರಾಮದ ಯುವ ಸಮೂಹ ಕಳೆದ 21 ವರ್ಷಗಳಿಂದ ನಿರಂತರವಾಗಿ ಗೌರಿ-ಗಣೇಶ ಉತ್ಸವ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಹಿರಿಯರಾದ ಮಾಚಯ್ಯ ಮಾತನಾಡಿದರು.
ಸಮಿತಿ ಅಧ್ಯಕ್ಷ ಲಿಂಗರಾಜು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ರಾಜು, ಸಿದ್ದಪಾಜಿ, ಎಂ.ಆರ್. ಸುಂದರ್, ಸುನಿಲ್, ಉಣ್ಣಿಕೃಷ್ಣ, ವಸಂತ್, ಮಲ್ಲೇಶ್, ಅಶೋಕ್, ಕೋಮರಪ್ಪ, ಗಂಗಾಧರ್, ಪರಮೇಶ್, ಶಾಂತಪ್ಪ, ವೆಂಕಟೇಶ್, ಧರ್ಮಪ್ಪ, ಮಾಲಂಬಿ ಗ್ರಾಮ ಸಮಿತಿ ಅಧ್ಯಕ್ಷ ಮಹೇಶ್, ವಿಜಯ್, ಲೀಲಾ ದೇವದಾಸ್, ಮುತ್ತಮ್ಮ ಗಣೇಶ್, ಲತಾ ದೇವರಾಜ್, ವೀಣಾ ರಮೇಶ್, ಕೆ.ಎನ್. ದಿನೇಶ್, ರಕ್ಷಿತಾ ಸಂತೋಷ್ ಸೇರಿದಂತೆ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳಿಂದ ನೃತ್ಯ ಹಾಗೂ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು.