ಗೋಣಿಕೊಪ್ಪದಲ್ಲಿ 21ನೇ ವರ್ಷದ ಗ್ರೀಸ್ ಕಂಬ ಹತ್ತುವ ಸ್ಪರ್ಧೆ
admincoorgdaily

ಗೋಣಿಕೊಪ್ಪ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗೋಣಿಕೊಪ್ಪ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ 21ನೇ ವರ್ಷದ ಗ್ರೀಸ್ ಕಂಬ ಹತ್ತುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣದಲ್ಲಿ ನಡೆದ ಸ್ಪರ್ಧೆಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ 15ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ತಮ್ಮ ಸಾಹಸ ಪ್ರದರ್ಶಿಸಿದರು.
ರಾಜ್ಯೋತ್ಸವದ ಅಂಗವಾಗಿ ಆಟೋ ನಿಲ್ದಾಣದಲ್ಲಿ ಅನ್ನದಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಗೌರವ ಅಧ್ಯಕ್ಷ ಕುಲ್ಲಚಂಡ ಬೋಪಣ್ಣ ಧ್ವಜಾರೋಹಣ ನೆರವೇರಿಸಿದರು.
ಚಂದನ್ ಕಾಮತ್ ಸೇರಿದಂತೆ ಸಂಘದ ಅಧ್ಯಕ್ಷ ಹಲ್ಚಿರ ಜಿಮ್ಮ ಸುಬ್ಬಯ್ಯ, ಕಾರ್ಯದರ್ಶಿ ಹೇಮಂತ್ ಕೈಕೇರಿ, ಖಜಾಂಚಿ ಪಿ.ಪಿ. ರಂಜು, ಸಹಕಾರ್ಯದರ್ಶಿ ಹೆಚ್.ಎಂ. ಪೂಣಚ್ಚ, ನಿರ್ದೇಶಕರಾದ ಬಿ.ಎಸ್. ದಿನೇಶ್, ರಕ್ಷಿತ್ ಬೋಪಣ್ಣ, ಹೆಚ್.ಈ ರಾಜು, ಚಂದ್ರಬಾನು, ಸತೀಶ್, ಚಂದ್ರ. ಪಿ.ಆರ್, ರಮೇಶ್, ಎ.ಕೆ. ಕಿರಣ್ಕುಮಾರ್, ಶಂಕರ್, ಹೆಚ್.ಡಿ. ಮಹಾದೇವ, ಮಾಜಿ ಉಪಾಧ್ಯಕ್ಷ ವಿ.ಸಿ. ಪ್ರದೀಪ್, ಮಾಜಿ ಕಾರ್ಯದರ್ಶಿ ಕೆ.ವಿ. ಸುರೇಶ್, ವಸಂತ ಸೇರಿದಂತೆ ಆಟೋ ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.