ಸೆ.22ಕ್ಕೆ ಕೊಡಗು ಡಿಸಿಸಿ ಬ್ಯಾಂಕ್ 101ನೇ ವಾರ್ಷಿಕ ಮಹಾಸಭೆ
admincoorgdaily

ಮಡಿಕೇರಿ: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ೧೦೧ನೇ ವಾರ್ಷಿಕ ಮಹಾಸಭೆ ಸೆ.೨೨ರ ಮಂಗಳವಾರ ಮಡಿಕೇರಿಯ ಉನ್ನತಿ ಭವನದ ದಿ.ಪಂದ್ಯಂಡ ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೨೧ರಲ್ಲಿ ಆರಂಭಗೊಂಡ ಬ್ಯಾಂಕ್ ೧೦೫ ವರ್ಷ ಪೂರೈಸಿ ೧೦೬ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ೨೦೨೫-೨೬ನೇ ಸಾಲಿನಲ್ಲಿ ಬ್ಯಾಂಕ್ ೩೧.೫೧ ಕೋಟಿ ರೂ. ಒಟ್ಟು ಲಾಭ ಗಳಿಸಿದ್ದು, ತೆರಿಗೆ ಹಾಗೂ ಶಾಸನಬದ್ಧ ಬಾಬ್ತುಗಳಿಗೆ ೯.೧೨ ಕೋಟಿ ರೂ. ಕಾಯ್ದಿರಿಸಿ ೨೨.೩೯ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಠೇವಣಿ ಸಂಗ್ರಹದಲ್ಲಿ ಜಿಲ್ಲೆಯ ೨೪ ಬ್ಯಾಂಕ್‌ಗಳ ಪೈಕಿ ೨೦೪೩.೧೧ ಕೋಟಿ ರೂ.ನೊಂದಿಗೆ ೩ನೇ ಸ್ಥಾನ, ಸಾಲ ವಿತರಣೆಯಲ್ಲಿ ೧೭೭೧.೧೪ ಕೋಟಿ ರೂ.ನೊಂದಿಗೆ ೨ನೇ ಸ್ಥಾನದಲ್ಲಿದ್ದು, ಒಟ್ಟಾರೆ ಮಾರುಕಟ್ಟೆ ಪಾಲು ಶೇ.೨೧.೩೬ರೊಂದಿಗೆ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ಸಿಇಒ ಎಂ.ಕೆ.ಬೆಳ್ಯಪ್ಪ, ನಿರ್ದೇಶಕರಾದ ಹೊಟ್ಟೆಂಗಡ ಎಂ.ರಮೇಶ್, ಹೊಸೂರು ಜೆ.ಸತೀಶ್ ಕುಮಾರ್, ಎಚ್.ಕೆ.ಮಾದಪ್ಪ ಇದ್ದರು.