ಶೂಟ್ ಮಾಡಿಕೊಂಡು 22 ವರ್ಷದ ನೀಟ್ ಆಕಾಂಕ್ಷಿ ಆತ್ಮಹತ್ಯೆ!
ಬಿಲಾಸ್‌ಪುರ: 22 ವರ್ಷದ ನೀಟ್ ಅಭ್ಯರ್ಥಿ ಸಂಸ್ಕಾರ್ ಸಿಂಗ್ ಅವರು ತಮ್ಮ ಮನೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರು ತಿಳಿಸಿದಂತೆ, ಸಂಸ್ಕಾರ್ ಬುದ್ಧಿವಂತ ಮತ್ತು ಪರಿಶ್ರಮಿ ವಿದ್ಯಾರ್ಥಿಯಾಗಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಸೆಪ್ಟೆಂಬರ್ 27 ರಂದು ನಡೆದಿದೆ. ಗುಂಡೇಟಿನ ಶಬ್ದ ಕೇಳಿ ಕುಟುಂಬ ಸದಸ್ಯರು ಹೋದಾಗ ಅವರನ್ನು ತಮ್ಮ ಕೋಣೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಆಘಾತಗೊಂಡಿದ್ದಾರೆ. ಮರಣೋತ್ತರ ವರದಿ ಲಭ್ಯವಾದ ನಂತರ ಮಾತ್ರ ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಸ್ಕಾರ್ ಪರೀಕ್ಷಾ ಒತ್ತಡದಿಂದಾಗಿ ತೀವ್ರ ಮಾನಸಿಕ ಸಂಕಟವನ್ನು ಅನುಭವಿಸುತ್ತಿದ್ದರು. ಪ್ರಾಥಮಿಕ ತನಿಖೆ ಪ್ರಕಾರ, ಆತ್ಮಹತ್ಯೆಯ ಹಿಂದೆ ಶೈಕ್ಷಣಿಕ ಒತ್ತಡ ಇರುವ ಸಾಧ್ಯತೆ ಎಂದು ತಿಳಿದು ಬಂದಿದೆ.
What's Your Reaction?
Like
0
Dislike
0
Love
1
Funny
0
Angry
0
Sad
3
Wow
0
